ಲಖನೌ, ಜೂ 01(DaijiworldNews/MS): ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡರೂ ತನ್ನದೇಹದಲ್ಲಿ ಯಾವುದೇ ಪ್ರತಿರೋಧಕ ಶಕ್ತಿ ಉತ್ಪಾದನೆ ಆಗಿಲ್ಲ. ಹೀಗಾಗಿ ಲಸಿಕೆ ಹೆಸರಲ್ಲಿ ನನಗೆ ವಂಚನೆ ಎಸಗಲಾಗಿದೆ ಎಂದು ಉತ್ತರ ಪ್ರದೇಶದ ಏಶಿಯಾನಾ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ರುಚಿಖಾಂಡ್ ನಿವಾಸಿಯಾಗಿರುವ ಪ್ರತಾಪ್ ಚಂದ್ರ ಅವರು ಏಪ್ರಿಲ್ 8 ರಂದು ಆಶಿಯಾನಾದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ನ ಮೊದಲ ಡೋಸ್ ತೆಗೆದುಕೊಂಡಿದ್ದು, ಅವರು 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಾಗಿತ್ತು. ಆದರೆ ಕೇಂದ್ರದಿಂದ ಹೆಚ್ಚಿನ ಅಂತರವನ್ನು ಸೂಚಿಸುವ ಹೊಸ ಅಧಿಸೂಚನೆಯನ್ನು ಹೊರಬಿದ್ದ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಲು ಕಾಯುತ್ತಿದ್ದಾರೆ.
"ಮೊದಲ ಡೋಸ್ ಪಡೆದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂದು ಟ್ರಾವೆಲ್ಸ್ ಉದ್ಯಮ ನಡೆಸುತ್ತಿರುವ ಪ್ರತಾಪ್ ಚಂದ್ರ ಆರೋಪಿಸಿದ್ದಾನೆ. ಕೋವಿಡ್ಶೀಲ್ಡ್ ಮೊದಲ ಡೋಸ್ ಪಡೆದ ಬಳಿಕ ಪ್ರತಿರೋಧಕ ಶಕ್ತಿ ವೃದ್ಧಿಯಾಗಬೇಕಿತ್ತು. ಅದರ ಬಗ್ಗೆ ತಿಳಿಯಲು ಐಸಿಎಂಆರ್ ಅನುಮೋದಿತ ಖಾಸಗಿ ಲ್ಯಾಬ್ನಲ್ಲಿ ಮೇ 25ರಂದು ಪರೀಕ್ಷೆಗೆ ಒಳಗಾದೆ. ಆದರೆ ವರದಿಯ ಪ್ರಕಾರ ನನ್ನ ದೇಹದಲ್ಲಿ ಯಾವುದೇ ಪ್ರತಿರೋಧ ಶಕ್ತಿ ವೃದ್ಧಿ ಆಗಿಲ್ಲ ಕರೊನಾ ಲಸಿಕೆ ಪಡೆದ ಬಳಿಕ ಬಿಳಿರಕ್ತಕಣಗಳ ಸಂಖ್ಯೆ 3 ಲಕ್ಷದಿಂದ 1.5 ಲಕ್ಷಕ್ಕೆ ಇಳಿದಿದೆ. ಲಸಿಕೆ ಹೆಸರಿನಲ್ಲಿ ನನಗೆ ತುಂಬಾ ಮೋಸ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
"ಮೇ 21 ರಂದು, ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ಅವರು ಮಾಧ್ಯಮಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ನಂತರ, ದೇಹದಲ್ಲಿ ಉತ್ತಮ ಮಟ್ಟದ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ, ಆದರೆ ಕೊವಾಕ್ಸಿನ್ ಲಸಿಕೆ, ಎರಡನೆಯ ಡೋಸ್ ನಂತರ ಮಾತ್ರ ಸಾಕಷ್ಟು ರೋಗನಿರೋಧಕ ್ಶಕ್ತಿ ಉತ್ಪಾದನೆ ಆಗುತ್ತದೆ " ಅವರು ಹೇಳಿದ್ದಾರೆ, ಆದರೆ ನನ್ನ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಯಾಗಿಲ್ಲ" ಎಂದು ಹೇಳಿದ್ದಾರೆ.
ಪ್ರತಾಪ್ ಚಂದ್ರ ನೀಡಿದ ದೂರಿನಲ್ಲಿ , ಲಸಿಕೆ ಉತ್ಪಾದನಾ ಕಂಪನಿಯ ಮಾಲೀಕರು, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ, ಐಸಿಎಂಆರ್ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರು ಮತ್ತು ಡಬ್ಲ್ಯುಎಚ್ಒ ನಿರ್ದೇಶಕರನ್ನು ಹೆಸರಿಸಿದ್ದಾರೆ
"ಭಾನುವಾರ ತಡರಾತ್ರಿ ಆಶಿಯಾನಾದಲ್ಲಿ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ದೂರು ಪರಿಶೀಲನೆಗಾಗಿ ಅರ್ಜಿಯನ್ನು ಸಿಎಮ್ಒ ಲಕ್ನೋಗೆ ಕಳುಹಿಸಲಾಗುವುದು" ಎಂದು ಪೂರ್ವ ವಲಯದ ಎಡಿಸಿಪಿ, ಖಾಸಿಮ್ ಅಬಿಡಿ ತಿಳಿಸಿದ್ದಾರೆ.