ನವದೆಹಲಿ, ಜೂ 01(DaijiworldNews/MS):ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ ಲಸಿಕೆ ಕಾರ್ಯಕ್ರಮ ಸೋಲನುಭವಿಸಿದೆ. ಈ ಶೂನ್ಯ ಲಸಿಕಾ ಅಭಿಯಾನ ನೀತಿಯು ಭಾರತ ಮಾತೆಯ ಹೃದಯಕ್ಕೆ ಚಾಕು ಇರಿದಂತೆ ಎಂದು ಸೋಮವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗಂಭೀರವಾದ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ,ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ಟೀಕಿಸಿದ ಅವರು, ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸರ್ಕಾರದ ವ್ಯಾಕ್ಸಿನೇಷನ್ ತಂತ್ರ ಭಾರತ ಮಾತೆಯ ಹೃದಯದಲ್ಲಿ ಚಾಕು ಇರಿದಂತೆ. ಇದು ದುರಂತ ಸತ್ಯ ಎಂದು ಟೀಕೆಗೈದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಫಕೀರನು ಲಸಿಕೆ ನೀತಿಯನ್ನು ಬದಲಾಯಿಸಲಿಲ್ಲ ಅದರ ಬಗ್ಗೆ ಯೋಚಿಸಿಯೂ ಇಲ್ಲ ಏಕೆಂದರೆ ಮೋದಿ ಮಹಲ್ ಅನ್ನು ನಿರ್ಮಿಸುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಹಿಂದೆ "ಕೇಂದ್ರ ಸರ್ಕಾರದ ದುರಹಂಕಾರದಿಂದಾಗಿ ಶೇಕಡಾ 97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಓರ್ವ ವ್ಯಕ್ತಿ (ಪ್ರಧಾನಿ ಮೋದಿ) ಹಾಗೂ ಆತನ ದುರಹಂಕಾರ ಮತ್ತು ಒಂದು ವೈರಸ್ ಹಾಗೂ ಅದರ ರೂಪಾಂತರ ತಳಿಗಳಿಂದ ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಕೊರೊನಾ ನಿರ್ವಹಣೆಯನ್ನು ಕೇಂದ್ರವು ಕಳಪೆಯಾಗಿ ಮಾಡುತ್ತಿರುವ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಇತ್ತೀಚೆಗೆ ಕೇಂದ್ರದ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.