ಬೆಂಗಳೂರು, ಮೇ.31 (DaijiworldNews/HR): ಕೊರೊನಾ ಲಾಕ್ಡೌನ್ ಪರಿಸ್ಥಿತಿಯಲ್ಲಿ ನಿರ್ಗತಿಕರಿಗೆ ಸಹಾಯ ಮಾಡಲು ಕರ್ನಾಟಕ ಪ್ರದೇಶದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಸಾಮಾಜಿಕ ಜವಾಬ್ದಾರಿಯ ಯೋಜನೆಯ ಅಂಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದಾದ್ಯಂತ ತನ್ನ ಎಲ್ಲಾ ಮಳಿಗೆಯ ತಂಡದ ಸದಸ್ಯರಿಂದ ನಿರ್ಗತಿಕ ಮತ್ತು ಕೊರೊನಾ ಪಿಡುಗಿನಿಂದ ಬಳಲುತ್ತಿರುವ ಅಗತ್ಯವಿರುವವರಿಗೆ ಆಹಾರ ಕಿಟ್ಗಳನ್ನು ವಿತರಿಸುತ್ತಿದೆ.
ಇನ್ನು ಕರ್ನಾಟಕದಾದ್ಯಂತ ವಿವಿಧ ಚಾರಿಟಬಲ್ ಟ್ರಸ್ಟ್ ಮತ್ತು ಇತರ ಕಲ್ಯಾಣ ಸಂಘಗಳ ಮೂಲಕ ಆಹಾರ ಕಿಟ್ಗಳನ್ನು ವಿತರಿಸಲಾಯಿತು.