ದಾಂತೇವಾಡ, ಮೇ.31 (DaijiworldNews/HR): ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಮಹಿಳಾ ನಕ್ಸಲ್ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಗೀದಂ ಪೊಲೀಸ್ ಠಾಣಾ ವ್ಯಾಪ್ತಿಯ ಗುಮಾಲ್ನರ್ ಗ್ರಾಮದ ಬಳಿ ಜಿಲ್ಲಾ ಪೊಲೀಸ್ ಮೀಸಲು ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಮಾಹಿತಿ ನೀಡಿದ್ದಾರೆ.
ಇನ್ನು ಈ ವೇಳೆ ಮಹಿಳಾ ನಕ್ಸಲರೊಬ್ಬರು ಮೃತಪಟ್ಟಿದ್ದು, ಅವರನ್ನು ವೈಕೋ ಪೆಕ್ಕೊ ಎಂದು ಗುರುತಿಸಲಾಗಿದೆ.
ಇನ್ನುಳಿದ ನಕ್ಸಲರು ಅಲ್ಲಿಂದ ಪರಾರಿಯಾಗಿದ್ದು, ಘಟನಾ ಸ್ಥಳದಿಂದ ಸುಧಾರಿತ ಸ್ಫೋಟಕ ಸಾಮಗ್ರಿಗಳು (ಐಇಡಿ), ಔಷಧಿಗಳು, ದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿವೆ' ಎಂದು ಅವರು ಹೇಳಿದರು.