ನವದೆಹಲಿ, ಮೇ.31 (DaijiworldNews/HR): ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸತತ 16ನೇ ಬಾರಿಗೆ ಸೋಮವಾರ ಮತ್ತೆ ಹೆಚ್ಚಳವಾಗಿದೆ.
ಸೋಮವಾರ ಪೆಟ್ರೋಲ್ ದರಲ್ಲಿ ಲೀಟರ್ ಮೇಲೆ 29 ಪೈಸೆ ಏರಿಕೆಯಾಗಿದ್ದು, ಡಿಸೇಲ್ ದರ 56 ಪೈಸೆ ಹೆಚ್ಚಳವಾಯಿತು. ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ 100.47ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ 92.45ಗೆ ಮಾರಾಟವಾಗುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 97.07, ಡೀಸೆಲ್ 89.99 ಆಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 94.23 ಆಗಿದೆ. ಇನ್ನೊಂದೆಡೆ ಡೀಸೆಲ್ ಬೆಲೆ 85.15ಗೆ ಏರಿದೆ.
ಬೋಪಾಲ್ನಲ್ಲಿ ಪೆಟ್ರೋಲ್ ದರ ಲೀಟರ್ಗೆ 102.34 ಹಾಗೂ ಡೀಸೆಲ್ ದರ 93.37 ಆಗಿದೆ.