ನವದೆಹಲಿ, ಮೇ.31 (DaijiworldNews/HR): ಜೂನ್ ತಿಂಗಳ ವೇಳೆಗೆ ಕೇಂದ್ರಕ್ಕೆ 10 ಕೋಟಿ ಕೋವಿಶೀಲ್ಡ್ ಡೋಸ್ ಮತ್ತು ಜುಲೈ ಅಂತ್ಯದೊಳಗೆ ಇನ್ನೂ 10ರಿಂದ 12 ಕೋಟಿ ಡೋಸ್ ಗಳನ್ನು ಒದಗಿಸುವುದಾಗಿ ಪುಣೆ ಮೂಲದ ಸೀರಮ್ ಇನ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಹೇಳಿದೆ.
ಮೇ ತಿಂಗಳಿನಲ್ಲಿ 6.5 ಕೋಟಿ ಡೋಸ್ಗಳಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದೀಗ ನಾವು ಜೂನ್ ತಿಂಗಳಿನಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಳ ಮಾಡಿದ್ದು, 9ರಿಂದ 10 ಕೋಟಿ ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಯನ್ನು ವಿತರಿಸುವುದಾಗಿ ಪತ್ರದಲ್ಲಿ ತಿಳಿಸಿದೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಕೊರೊನಾ ಲಸಿಕೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಕಂಪನಿ ಉದ್ಯೋಗಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸೀರಮ್ ಇನ್ ಟಿಟ್ಯೂಟ್ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದೆ.