ನವದೆಹಲಿ, ಮೇ.31 (DaijiworldNews/HR): ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ, ಒಡಿಶಾ ಮತ್ತು ಸಿಕ್ಕಿಂ ಸೇರಿ ಐದು ರಾಜ್ಯಗಳಲ್ಲಿ ಕೊರೊನಾ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ.
ತೆಲಂಗಾಣದಲ್ಲಿ 10 ದಿನಗಳ ಕಾಲ ಲಾಕ್ಡೌನ್ ವಿಸ್ತರಿಸಲಾಗಿದ್ದು, ಜೂನ್ 9ರ ವರೆಗೆ ಮುಂದುವರಿಯಲಿದೆ. ಆದರೆ ಲಾಕ್ಡೌನ್ ಮುಂದುವರಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಜೂನ್ 15ರ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಆಕ್ಸಿಜನ್ ಹಾಸಿಗೆಗಳ ಲಭ್ಯತೆ ನೋಡಿಕೊಂಡು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಹೆಚ್ಚಿನ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇನ್ನು ಕೇರಳ, ದೆಹಲಿ, ಪುದುಚೇರಿ, ಮೇಘಾಲಯ, ಗೋವಾ ಮತ್ತು ಮಿಜೋರಾಂಗಳಲ್ಲಿ ಶನಿವಾರವೇ ಲಾಕ್ಡೌನ್ ವಿಸ್ತರಿಸಲಾಗಿದೆ.