ನವದೆಹಲಿ, ಮೇ.30 (DaijiworldNews/HR): ಕಳೆದ ಒಂದು ತಿಂಗಳಿನಿಂದ ಭಾರತೀಯ ರೈಲ್ವೇ ದೇಶಾದ್ಯಂತ 20,770 ಟನ್ಗಳಷ್ಟು ದ್ರವ ರೂಪದ ಆಕ್ಸಿಜನ್ ಸಾಗಾಟ ಮಾಡಿದ್ದು, 15 ರಾಜ್ಯಗಳ ಜನರಿಗೆ ನೆರವಾಗಿದೆ.
305 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ಇದುವರೆ ಬೇರೆ ಬೇರೆ ಸಥಳಗಲೀಗೆ ಆಮ್ಲಜನಕ ತಲುಪಿಸಿದ್ದರೆ, ಇನ್ನೂ ಆರು ರೈಲುಗಳು 420 ಟನ್ಗಳಷ್ಟು ದ್ರವರೂಪದಲ್ಲಿರುವ ವೈದ್ಯಕೀಯ ಆಕ್ಸಿಜನ್ ಗಳನ್ನು 26 ಟ್ಯಾಂಕರ್ಗಳಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ಹೊರಟಿವೆ.
ಇನ್ನು ಕರ್ನಾಟಕ, ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ತೆಲಂಗಾಣ ರಾಜ್ಯಗಳು ಇದುವರೆಗೂ ಒಟ್ಟಾರೆಯಾಗಿ 1600 ಟನ್ಗಳಷ್ಟು ದ್ರವ ಆಕ್ಸಿಜನ್ ಗಳನ್ನು ಸ್ವೀಕರಿಸಿವೆ.
15 ರಾಜ್ಯಗಳ 39 ನಗರಗಳಿಗೆ 1,237 ಟ್ಯಾಂಕರ್ಗಳಲ್ಲಿ 20,770 ಟನ್ಗಳಷ್ಟು ದ್ರವ ರೂಪದ ಆಮ್ಲಜನಕವನ್ನು ತಲುಪಿಸಲಾಗಿದೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.