ಹುಬ್ಬಳ್ಳಿ, ಮೇ.30 (DaijiworldNews/HR): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯಲ್ಲಿ ಸಮರ್ಥನಾಯಕರಿಲ್ಲ, ಹೀಗಾಗಿ ನಾಯಕತ್ವ ಬದಲಾವಣೆ ಮಾಡಿಲ್ಲ ಎಂದು ಆರೋಪಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಹ್ಲಾದ್ ಜೋಶಿ, "ಸಮರ್ಥರು ಎಂದು ಹೇಳಿಕೊಂಡು ಅವರಲ್ಲೆ ಬಡಿದಾಟವಾಗುತ್ತಿದದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಆದ್ಯತೆ ಕೊರೊನಾ ನಿವಾರಣೆ , ದೇಶದ ಆರ್ಥಿಕತೆ ಕಡೆಗೆ ಮಾತ್ರ" ಎಂದಿದ್ದಾರೆ.
ಇನ್ನು "ವಯಸ್ಸಿನ ಕಾರಣಕ್ಕಾಗಿ ಯಡಿಯೂರಪ್ಪರವರನ್ನು ಹುದ್ದೆಯಿಂದ ಇಳಿಸಬೇಕೆಂಬ ಒತ್ತಡ ಸರಿಯಲ್ಲ" ಎಂದರು.
ಸಚಿವರ ದೆಹಲಿ ಭೇಟಿ ಬಗ್ಗೆ ಮಾತನಾಡಿದ ಅವರು, "ಹುಬ್ಬಳ್ಳಿಯಲ್ಲಿದ್ದಾಗ ದೆಹಲಿಯಲ್ಲಿದ್ದಾಗ ಸಚಿವರು ಭೇಟಿಯಾಗುತ್ತಾರೆ. ಆದರೆ ರಾಜ್ಯ ರಾಜಕೀಯದ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ, ದೆಹಲಿಗೆ ಇತ್ತಿಚೆಗೆ ಕೆಲವರು ಬಂದಿದ್ದರು. ಆದರೆ ದೆಹಲಿಯಲ್ಲಿ ನನ್ನನ್ನು ಯಾರೂ ಭೇಟಿಯಾಗಿಲ್ಲ" ಎಂದು ತಿಳಿಸಿದ್ದಾರೆ.