ನವದೆಹಲಿ, ಮೇ.30 (DaijiworldNews/HR): ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಅವರು ಕೊರೊನಾ ಲಸಿಕೆಗಳನ್ನು ಮಾರಾಟಮಾಡಿ ಹಣ ಸಂಪಾದಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಆರೋಪಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, "ಕರ್ನಾಟಕದ ಖಾಸಗಿ ಆಸ್ಪತ್ರೆಯಲ್ಲಿ ಸುಬ್ರಮಣ್ಯ ಪ್ರತಿ ಲಸಿಕೆಗೆ 700 ರೂಪಾಯಿಗೆ ಮಾರಾಟಮಾಡಿದ್ದು, ಈ ಸಂಬಂಧ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಜೊತೆಗೆ ಅವರನ್ನು ಸಂಸದ ಮತ್ತು ಶಾಸಕ ತೆಗೆದುಹಾಕಬೇಕು" ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ, "ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸುಮಾರು 900 ರಿಂದ 1200 ರೂ ವರಗೆ ಮಾರಾಟ ಮಾಡಲಾಗುತ್ತಿದ್ದು, ಇದರಲ್ಲಿ ಆಡಳಿತ ಪಕ್ಷದ ಸದಸ್ಯರು ಸಹಿತ ಭಾಗಿಯಾಗಿದ್ದಾರೆ ಅದರಿಂದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮಧ್ಯಪ್ರವೇಶಿಸಿ ದೂರು ದಾಖಲಿಸಬೇಕು" ಎಂದಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಆಡಿಯೊ ಟೇಪ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದರೆ ನೀವು 900 ರುಪಾಯಿ ಕೊಡಬೇಕಾಗುತ್ತದೆ ಎಂದು ಕೇಳಲಾಗುತತಿದದು, ಅದಕ್ಕೆ ನನ್ನ ಬಳಿ ಅಷ್ಟು ಹಣ ಇಲ್ಲ ಎಂದು ಹೇಳಿದಾಗ ಅದಕ್ಕೆ ವ್ಯಕ್ತಿಯೋರ್ವ ಇಲ್ಲ ನಾವು ಆ 900 ರುಪಾಯಿ ಹಣದಲ್ಲಿ 700 ರುಪಾಯಿಯನ್ನು ಶಾಸಕ ರವಿ ಸುಬ್ರಮಣ್ಯರಿಗೆ ಕೊಡಬೇಕು ಎಂದು ಹೇಳಲಾಗಿದೆ.