ಕೇರಳ, ಮೇ.29 (DaijiworldNews/HR): ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಕೇರಳದಲ್ಲಿ ಜೂನ್ 9 ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮೇ 8ರಿಂದ ಎರಡು ಬಾರಿ ಲಾಕ್ಡೌನ್ ಘೋಷಿಸಲಾಗಿತ್ತು.
ಇನ್ನು ಮಲಪ್ಪುರಂ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಸಾಮಾನ್ಯ ಲಾಕ್ಡೌನ್ ಮುಂದುವರಿಯಲಿದೆ ಎಂದು ವಿಜಯನ್ ತಿಳಿಸಿದ್ದಾರೆ.
ಬ್ಯಾಂಕ್ಗಳು ಮಂಗಳವಾರ, ಗುರುವಾರ , ಶನಿವಾರ ಸಂಜೆ 5 ಗಂಟೆ ತನಕ ಕಾರ್ಯಾಚರಿಸಬಹುದು. ವಸ್ತ್ರ ಮಳಿಗೆ, ಚಪ್ಪಲಿ ಅಂಗಡಿ, ಚಿನ್ನಾಭರಣ ಮಳಿಗೆ, ಶಾಲಾ ಪುಸ್ತಕ, ಸಾಮಾಗ್ರಿ ಮಳಿಗೆಗಳು ಸೋಮವಾರ, ಬುಧವಾರ, ಶುಕ್ರವಾರಗಳಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ತನಕ ತೆರೆಯಬಹುದು ಎಂದು ತಿಳಿಸಲಾಗಿದೆ.