ನವದೆಹಲಿ, ಮೇ.29 (DaijiworldNews/HR): ಕೊರೊನಾ ಹೆಚ್ಚಳದ ನಡುವೆಯೂ ದೇಶದಲ್ಲಿ ಲಸಿಕೆ ಅಭಾವವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು 216 ಕೋಟಿ ಡೋಸ್ ಹೊಸ ಲಸಿಕೆಗಳು ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾರತದ ವ್ಯಾಕ್ಸಿನೇಷನ್ ಯೋಜನೆಯ ಬಗ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಓವೈಸಿ, "ಭಾರತೀಯ ಲಸಿಕೆಯಾದ ಕೋವ್ಯಾಕ್ಸಿನ್ ಒಂದು ಬ್ಯಾಚ್ನಲ್ಲಿ ತಯಾರಿಸಿ ಬಿಡುಗಡೆ ಮಾಡಲು ನಾಲ್ಕು ತಿಂಗಳುಗಳ ಅವಧಿ ತೆಗೆದುಕೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರ ಹೇಳಿರುತ್ತಿರುವುದಂತೆ, ಈ ಡಿಸೆಂಬರ್ ವೇಳೆಗೆ 216 ಕೋಟಿ ಪ್ರಮಾಣದ ಲಸಿಕೆಯನ್ನು ಭಾರತ್ ಬಯೋಟೆಕ್ ಹೇಗೆ ಉತ್ಪಾದಿಸಲು ಸಾಧ್ಯ" ಎಂದು ಪ್ರಶ್ನೆ ಮಾಡಿದ್ದಾರೆ.
"ಆಗಸ್ಟ್ ನಿಂದ ಡಿಸೆಂಬರ್ ನಡುವೆ 216 ಕೋಟಿ ಲಸಿಕೆಗಳನ್ನು ಮ್ಯಾಜಿಕ್ ಮಾಡಿ ತಯಾರಿಸುತ್ತದೆ ಎಂದು ಸರ್ಕಾರ ಹೇಳುತ್ತಿದ್ದು, ಇದು ನಿಜವಾಗಿದ್ದರೆ ಇಲ್ಲಿಯವರೆಗೆ 55 ಕೋಟಿ ಕೋವ್ಯಾಕ್ಸಿನ್ ಉತ್ಪಾದನೆ ಆಗಿರಬೇಕಿತ್ತು. ಈಗ ಸದ್ಯಕ್ಕೆ ದಿನದಲ್ಲಿ ಭಾರತ್ ಬಯೋಟೆಕ್ 5 ಲೀಟರ್ ವ್ಯಾಕ್ಸಿನ್ ಉತ್ಪಾದನೆ ಆಗುತ್ತಿದ್ದು, ಆಗಸ್ಟ್ ವೇಳೆಗೆ ಇದು ದಿನಕ್ಕೆ 37 ಲೀಟರ್ಗೆ ಹೆಚ್ಚಾಗಲಿದೆ, ಈ ಅಂಕಿ ಅಂಶಗಳನ್ನು ನೋಡಿದರೆ ಭಾರತ್ ಬಯೋಟೆಕ್ ನಾಲ್ಕು ತಿಂಗಳ ವಿಳಂಬ ಅಥವ ಇನ್ನೂ ಹೆಚ್ಚು ವಿಳಂಬವಾಗುವ ಸಾಧ್ಯತೆಯಿದೆ" ಎಂದಿದ್ದಾರೆ.
ಇನ್ನು ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಸುಮಾರು 10 ಕೋಟಿ ಪ್ರಮಾಣವನ್ನು ತಲುಪಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ