ಕೋಲ್ಕತ್ತಾ, ಮೇ 29 (DaijiworldNews/MS): ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸುವ ಸಭೆಯಲ್ಲಿ ಅರ್ಧ ಗಂಟೆ ತಡವಾಗಿ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ನೆಪಮಾತ್ರಕ್ಕೆ ಭೇಟಿ ಮಾಡಿ ಸೋಕ್ಕು ತೋರಿಸಿದ್ದಾರೆ ಎಂದು ಕೇಂದ್ರದ ವಿರುದ್ದ ಆರೋಪಕ್ಕೆ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖಾಮುಖಿ ಭೇಟಿಯ ಒಂದು ದಿನದ ನಂತರ ದೀದಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮಂತ್ರಿಗಳ ಕಚೇರಿಯೂ ಮಾಧ್ಯಮಗಳಿಗೆ, ನನ್ನ ವಿರುದ್ದ ಸುಳ್ಳು ಹಾಗೂ ಏಕಪಕ್ಷೀಯ, ಪಕ್ಷಪಾತದ ಸುದ್ದಿಗಳನ್ನು" ಪೂರೈಸುತ್ತಿದೆ ಎಂದು ಆರೋಪಿಸಿದ್ದಾರೆ.
ನನ್ನನ್ನು ಈ ರೀತಿ ಅವಮಾನಿಸಬೇಡಿ. ನಮಗೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಿಕ್ಕಿದೆ, ಅದಕ್ಕಾಗಿಯೇ ನೀವು ಈ ರೀತಿ ವರ್ತಿಸುತ್ತಿದ್ದೀರಿ? ನೀವು ಎಲ್ಲವನ್ನೂ ಪ್ರಯತ್ನಿಸಿದ್ದೀರಿ ಮತ್ತು ಸೋತಿದ್ದೀರಿ. ಪ್ರತಿದಿನ ನಮ್ಮೊಂದಿಗೆ ಯಾಕೆ ಜಗಳವಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಸಭೆ ಬಳಿಕ ಉಂಟಾದ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದ್ದು ದೀದಿಯನ್ನು ಕೆರಳಿಸಿದ್ದು ಅತ್ತ ಬಿಜೆಪಿಯೂ . ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೀದಿ ಅವರ ಖಾಲಿ ಸ್ಥಾನವನ್ನು ತೋರಿಸುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
" ನಾನು ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಯೋಜನೆಗಳನ್ನು ಪೂರ್ವನಿರ್ಧರಿತವಾಗಿತ್ತು. . ಯಾಸ್ ಚಂಡಮಾರುತದಿಂದ ಉಂಟಾದ ಹಾನಿಯನ್ನು ನೋಡಲು ನಾನು ಸಾಗರ್ ಮತ್ತು ದಿಘಾಕ್ಕೆ ಪ್ರಯಾಣಿಸಬೇಕಾಗಿತ್ತು. ನಮ್ಮೆಲ್ಲಾ ಯೋಜನೆ ಸಿದ್ಧವಾದ ಬಳಿಕರ ಇದ್ದಕ್ಕಿದ್ದಂತೆ ಪ್ರಧಾನಿ ಆಗಮಿಸುತ್ತಿರುವ ಕರೆ ಬರುತ್ತದೆ.
ಪರಿಶೀಲನೆ ಸಭೆಗಾಗಿ ನಾವು ತೆರಳಿದಾಗ , ಪ್ರಧಾನಿ ಆಗಮಿಸಿದ್ದು ಸಭೆ ನಡೆಯುತ್ತಿದೆ ಈ ಸಮಯದಲ್ಲಿ ಯಾವುದೇ ಪ್ರವೇಶವಿರುವುದಿಲ್ಲ ಎಂದು ಹೇಳಿದರು. ಆದರೂ ತಾಳ್ಮೆಯಿಂದ ಕಾಯುತ್ತಿದ್ದೆವು. ನಂತರ, ನಾವು ಮತ್ತೆ ಕೇಳಿದಾಗ, ಮುಂದಿನ ಒಂದು ಗಂಟೆಯವರೆಗೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಲಾಯಿತು. ಮತ್ತೆ ಪ್ರಶ್ನಿಸಿದಾಗ ಸಭೆ ಕಾನ್ಫರೆನ್ಸ್ ಹಾಲ್ಗೆ ಸ್ಥಳಾಂತರಗೊಂಡಿದೆ ಎಂದು ಯಾರೋ ಹೇಳಿದರು, ಆದ್ದರಿಂದ ಮುಖ್ಯ ಕಾರ್ಯದರ್ಶಿ ಮತ್ತು ನಾನು ಅಲ್ಲಿಗೆ ಹೋಗಲು ನಿರ್ಧರಿಸಿದೆವು.
ಪ್ರಧಾನಿ-ಸಿಎಂ ಸಭೆ ಎಂದು ನಮಗೆ ತಿಳಿಸಿದ್ದು ಆದರೆ ಅಲ್ಲಿ ತೆರಳಿದಾಗ ಪ್ರಧಾನಮಂತ್ರಿಗಳು , ಗೌರವಾನ್ವಿತ ರಾಜ್ಯಪಾಲರು, ಕೇಂದ್ರ ಮುಖಂಡರು ಮತ್ತು ಕೆಲವು ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು. ಆದರೆ ಇದು ನಮಗೆ ನೀಡಿದ ಮಾಹಿತಿಯ ವಿರುದ್ದವಾಗಿದ್ದು ಆದ್ದರಿಂದ, ನಾವು ನಮ್ಮ ವರದಿಯನ್ನು ಪ್ರಧಾನಮಂತ್ರಿಗೆ ಸಲ್ಲಿಸಲು ನಿರ್ಧರಿಸಿ ಪ್ರಧಾನ ಮಂತ್ರಿಯ ಅನುಮತಿಯೊಂದಿಗೆ ನಾವು ದಿಘಾಗೆ ಹೋದೆವು ಎಂದು ದೀದಿ ಸ್ಪಷ್ಟಪಡಿಸಿದ್ದಾರೆ.