ಶಿವಮೊಗ್ಗ, ಮೇ.29 (DaijiworldNews/HR): ಕಾಂಗ್ರೆಸ್ನಲ್ಲಿ ಕ್ಯಾನ್ಸರ್ ರೋಗ ಇಟ್ಟುಕೊಂಡು ಬಿಜೆಪಿಯಲ್ಲಿ ರೋಗ ಇದೆ ಅಂತಾ ಸಿದ್ದರಾಮಯ್ಯ ಹುಡುಕುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಈ ರೋಗಕ್ಕೆ ನಮ್ಮಲ್ಲಿ ಕೇಂದ್ರದ ನಾಯಕರು ಇದ್ದಾರೆ. ಅದಕ್ಕೆ ಪರಿಹಾರ ಕಂಡು ಹಿಡಿದಿದ್ದಾರೆ. ಕೇಂದ್ರದ ನಾಯಕರಲ್ಲಿ ಔಷಧಿ ಇದೆ. ಆ ಔಷಧಿಯಿಂದ ಬಿಜೆಪಿ ಪಕ್ಷ ಏನು ಸಮಸ್ಯೆ ಇಲ್ಲದ ಹಾಗೆ ಅಧಿಕಾರ ಅವಧಿ ಪೂರೈಸುತ್ತೇವೆ. ಇದರಲ್ಲಿ ಯಾವ ಅನುಮಾನ ಇಲ್ಲ" ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ನಲ್ಲಿರುವ ಕ್ಯಾನ್ಸರ್ ರೋಗಕ್ಕೆ ಔಷಧಿ ಇಲ್ಲ. ಕಾಂಗ್ರೆಸ್ ಇಂದಲ್ಲ ನಾಳೆ ನಿಧಾನಕ್ಕೆ ಸಾಯುವಂತಹ ಪಕ್ಷವಾಗಿದ್ದು, ಕಾಂಗ್ರೆಸ್ ಇತಿಹಾಸ ನೋಡಿದರೆ ಮೂರು ಮೂರು ಮುಖ್ಯಮಂತ್ರಿಗಳು ಯಾರು ಬದಲಾಗಿದ್ದರು ಅಂತಾ ಗೊತ್ತಾಗುತ್ತೆ. ವೀರೇಂದ್ರ ಪಾಟೀಲ್ ಅವರಂತಹ ಪ್ರಾಮಾಣಿಕ ಮುಖ್ಯಮಂತ್ರಿ ಅವರನ್ನು ಏರ್ ಪೋರ್ಟ್ ನಲ್ಲೇ ಬದಲಾವಣೆ ಮಾಡಿದ್ರು. ಕಾಂಗ್ರೆಸ್ ಪಕ್ಷದಲ್ಲಿರುವ ಗುಂಪುಗಾರಿಕೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಇದ್ದಷ್ಟು ಯಾವ ಕಾಲದಲ್ಲಿ ಇರಲಿಲ್ಲ. ಅದಕ್ಕೆ ಸಾಕ್ಷಿಯೇ 2018 ರ ಚುನಾವಣಾ ಫಲಿತಾಂಶ" ಎಂದರು.
ಇನ್ನು "ಸಿಎಂ ಆಗಿದ್ದ ಸಿದ್ದರಾಮಯ್ಯ ಸೋತು, ಅನೇಕ ಕಾಂಗ್ರೆಸ್ಸಿನ ಮಂತ್ರಿಗಳು ಸೋತರು. ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಾಗೆ ಮಾಡಿದರು. 28 ಲೋಕಾಸಭಾ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲು ಸಾಧ್ಯವಾಯ್ತು. ಕಾಂಗ್ರೆಸ್ ಗೆ ಗುಂಪುಗಾರಿಕೆಯ ರೋಗ ಇದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ" ಎಂದಿದ್ದಾರೆ.
ಎಲ್ಲಾ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ವಿರುದ್ದ ಅಪ ಪ್ರಚಾರ ಮಾಡಿದ್ದಾರೆ. ಈ ವ್ಯಾಕ್ಸಿನ್ ಹಾಕಿಸಿಕೊಂಡರೆ ದೇಶದಿಂದ ಕೊರೊನಾ ಬೇಗ ಹೋಗುತ್ತೆ. ಕಾಂಗ್ರೆಸ್ನವರಿಗೆ ಇನ್ನು ಉದ್ಯೋಗ ಇರುವುದಿಲ್ಲ. ಟೀಕೆ ಮಾಡಲು ಅವಕಾಶ ತಪ್ಪುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಪ ಪ್ರಚಾರ ಮಾಡಿದ್ದಾರೆ" ಎಂದು ಹೇಳಿದ್ದಾರೆ.