ಜಮ್ಮು, ಮೇ.29 (DaijiworldNews/HR): 2019 ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಅವರ ಪತ್ನಿ ನಿಖಿತಾ ಕೌಲ್ ಅವರು ಸಮವಸ್ತ್ರ ಧರಿಸಿ ಇಂದು ಸೇನೆಗೆ ಸೇರ್ಪಡೆಯಾಗಿದ್ದಾರೆ.
ನಿಖಿತಾ ಕೌಲ್ ಅವರಿಗೆ ತಮಿಳುನಾಡಿನ ಚೆನ್ನೈ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ ಆಕೆಯ ಹೆಗಲಿಗೆ ಸ್ಟಾರ್ ನೀಡಿದ್ದಾರೆ.
ಈ ಕುರಿತು ಉಧಂಪುರ ರಕ್ಷಣಾ ಇಲಾಖೆ ಪಿಆರ್ಒ ಅಧಿಕೃತ ಟ್ವಿಟ್ಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದು, "ಸೈನಿಕ ಇಲ್ಲ ಎಂದ ಕೂಡಲೇ ಸೇನೆಯೂ ಅವರ ಕುಟುಂಬವನ್ನು ಬಿಟ್ಟುಬಿಡುವುದಿಲ್ಲ, ನಮ್ಮ ಸಹೋದರನ್ನು ಮದುವೆಯಾದ ವೀರನಾರಿ ಈಗ ಸೇನೆಯ ಸಮವಸ್ತ್ರ ಧರಿಸಿ ದೇಶ ಕಾಯಲು ನಿಂತಿದ್ದಾರೆ. ಅವರಿಗೆ ನಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ.
ಇನ್ನು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಹುತಾತ್ಮರಾಗಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು.