ರಾಜಸ್ತಾನ, ಮೇ 29 (DaijiworldNews/MS): ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ವೈದ್ಯ ದಂಪತಿಯನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್ಪುರ್ನಲ್ಲಿ ನಡೆದಿದೆ.
ಮೃತ ವೈದ್ಯ ದಂಪತಿಗಳನ್ನು ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 4.45ರ ವೇಳೆಗೆ ಕಾರನ್ನು ಓವರ್ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ವೈದ್ಯ ಏನಾಯಿತು ಎಂದು ತಿಳಿಯಲು ಕಿಟಕಿ ಗ್ಲಾಸ್ ಇಳಿಸುತ್ತಿದ್ದಂತೆಯೇ ಓರ್ವ ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಈ ಭಯಾನಕ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮೇಲ್ನೋಟಕ್ಕೆ ಕೊಲೆಯ ಹಿಂದೆ ಪೂರ್ವ ದ್ವೇಷ ಕಾರಣ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಎರಡು ವರ್ಷದ ಹಿಂದೆ ವೈದ್ಯ ದಂಪತಿ ಮಹಿಳೆಯೊಬ್ಬಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಘಟನೆಯ ಹಿನ್ನಲೆ:
ಡಾ. ಸುದೀಪ್ ತನ್ನ ಕ್ಲಿನಿಕ್ನಲ್ಲಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಡಾ. ಸೀಮಾಗೆ ಕಾಡುತ್ತಿತ್ತು. ಹೀಗಾಗಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗ ವಾಸವಿದ್ದ ಮನೆಗೆ ಡಾ. ಸೀಮಾ ಬೆಂಕಿ ಹಚ್ಚಿದ್ದರು ಎನ್ನಲಾಗಿದ್ದು, ಈ ಘಟನೆಯಲ್ಲಿ ತಾಯಿ-ಮಗು ಇಬ್ಬರು ಸಾವನ್ನಪ್ಪಿದ್ದರು.ಈ ಘಟನೆಗೂ ಮತ್ತು ವೈದ್ಯ ದಂಪತಿಯ ಕೊಲೆಗೂ ಸಂಬಂಧವಿರುವುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.