ಶಿವಮೊಗ್ಗ, ಮೇ 29 (DaijiworldNews/MS): ವಿವಾಹವಾಗಿ ಐದು ದಿನದಲ್ಲಿ ಮದುಮಗಳು ಕೊರೊನಾದಿಂದ ಮೃತಪಟ್ಟ ಘಟನೆ ಮಲಗೊಪ್ಪದಲ್ಲಿ ನಡೆದಿದೆ. ಮೃತ ನವವಿವಾಹಿತೆಯನ್ನು ಪೂಜಾ ಎಂದು ಗುರುತಿಸಲಾಗಿದೆ.
ಮೇ 24ರಂದು ಹರಿಗೆ ನಿವಾಸಿ ಮಹೇಶ್ ಅವರೊಂದಿಗೆ ಪೂಜಾ ಅವರ ವಿವಾಹವಾಗಿತ್ತು. ಮದುವೆಯಾದ ಮರುದಿನವೇ ಪೂಜಾಗೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ಜ್ವರ ವಿಪರೀತಗೊಂಡ ಹಿನ್ನಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಪೂಜಾ ಕೊನೆಯುಸಿರೆಳೆದಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದಛಾಯೆ ಆವರಿಸಿದೆ.