ಮೈಲಾಡುತುರೈ, ಮೇ.28 (DaijiworldNews/HR): ಐಸಿಸ್ ಭಯೋತ್ಪಾದಕ ಶಂಕಿತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಮಿಳುನಾಡಿನ ಮೈಲಾಡುತುರೈ ಬಳಿಯ ನೀಡೂರಿನಲ್ಲಿ ಬಂಧಿಸಿದೆ ಎಂದು ತಿಳಿದು ಬಂದಿದೆ.
ಬಂಧಿತನನ್ನು ಮೊಹಮ್ಮದ್ ಆಶಿಕ್(25) ಎಂದು ಗುರುತಿಸಲಾಗಿದೆ.
ಮೊಹಮ್ಮದ್ ಆಶಿಕ್ 2018ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ಭಯೋತ್ಪಾದಕ ಸಂಘಟನೆ ಜೊತೆಗೆ ಸೇರಿದದು, ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಪ್ರಮುಖ ಶಂಕಿತ ಎನ್ನಲಾಗಿದೆ.
ಇನ್ನು ಮೂಲಗಳ ಪ್ರಕಾರ, ತಮಿಳುನಾಡಿನ ವಿವಿಧ ಭಾಗಗಳಿಂದ ಏಳು ಜನರ ಗುಂಪುನ್ನು ಕಳಿಸಲಾಗಿದ್ದು, ಇದರಲ್ಲಿ ಒಂದು ಗುಂಪು ಕೊಯಮತ್ತೂರಿನಲ್ಲಿ ಇದ್ದು, ಉಗ್ರ ಚಟುವಟಿಕೆ ರೂಪಿಸಲು ಸಂಚು ರೂಪಿಸಿತ್ತು ಎನ್ನಲಾಗಿದೆ.
ಕೊಯಮತ್ತೂರಿನಲ್ಲಿ ನೆಲೆಯಾಗಿರುವ ನಾಯಕರನ್ನು ಹತ್ಯೆಮಾಡಲು ಸಂಚು ರೂಪಿಸಿದ್ದು, ಈ ಮೂಲಕ ಕೋಮು ಸೌಹಾರ್ದತೆ, ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಮುಂದಾಗಿತ್ತು ಎನ್ನಲಾಗಿದೆ.