ನವದೆಹಲಿ, ಮೇ.28 (DaijiworldNews/HR): ಕೊರೊನಾ ಲಸಿಕಾ ಅಭಿಯಾನಕ್ಕೆ ಲಸಿಕೆಯ ಕೊರತೆ ಕಾಣುತ್ತಿದ್ದು, 18 ರಿಂದ 44 ವರ್ಷದವರಿಗೆ ಲಸಿಕೆ ಸದ್ಯಕ್ಕೆ ಲಭ್ಯವಾಗಿಲ್ಲ. ಹೀಗಿದ್ದೂ ಡಿಸೆಂಬರ್ 2021ರ ವೇಳೆಗೆ ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಈ ಕುರಿತು ಮಾತನಾಡಿರುವಂತ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, "2021ರ ಅಂತ್ಯದ ವೇಳೆಗೆ ಕೊರೊನಾ ವಿರುದ್ಧ ಭಾರತಕ್ಕೆ ಸಂಪೂರ್ಣ ಲಸಿಕೆ ನೀಡಲಾಗುವುದು ಎಂದು ಶುಕ್ರವಾರ ಮಧ್ಯಾಹ್ನ ಘೋಷಿಸಿದ್ದಾರೆ.
ಇನ್ನು ಭಾರತದಲ್ಲಿ ಪ್ರತಿಯೊಬ್ಬರಿಗೂ ಡಿಸೆಂಬರ್ 2021ರ ಅಂತ್ಯದ ವೇಳೆಗೆ ಲಸಿಕೆಯನ್ನು ಪೂರ್ಣಗೊಳಿಸಲಾಗುವುದು, ರಾಹುಲ್ ಜಿ ಲಸಿಕೆಯ ಬಗ್ಗೆ ಕಾಳಜಿ ಹೊಂದಿದ್ದರೆ, ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಬಗ್ಗೆ ಗಮನ ಹರಿಸಬೇಕು" ಎಂದು ಹೇಳಿದ್ದಾರೆ.