ಮುಂಬೈ, ಮೇ.28 (DaijiworldNews/PY): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ತಳುಕು ಹಾಕಿಕೊಂಡಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥ್ ಪಿಠಾಣಿ ಅವರನ್ನು ಎನ್ಸಿಬಿ ಬಂಧಿಸಿದೆ.
ಸುಶಾಂತ್ ಸಿಂಗ್ ಅವರ ಗೆಳೆಯ ಸಿದ್ದಾರ್ಥ್ ಅವರನ್ನು ಹೈದರಾಬಾದ್ನಿಂದ ಎನ್ಸಿಬಿ ಬಂಧಿಸಿರುವುದಾಗಿ ವರದಿಯಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು 2020ರ ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನಲ್ಲಿ ಸಿದ್ದಾರ್ಥ್ ಪಿಠಾಣಿ ಅವರೂ ಕೂಡಾ ವಾಸವಾಗಿದ್ದರು.