ನವದೆಹಲಿ, ಮೇ.28 (DaijiworldNews/PY): "ಕೊರೊನಾ ವಿರುದ್ದದ ಹೋರಾಟದಲ್ಲಿ ಬಳಸುವ ಅಗತ್ಯ ವೈದ್ಯಕೀಯ ಉತ್ಪನ್ನಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು ರದ್ದುಗೊಳಿಸಿ" ಎಂದು ಕೇಂದ್ರಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾ ಸಾಂಕ್ರಾಮಿಕ ವೇಳೆ ಅಗತ್ಯ ವೈದ್ಯಕೀಯ ಉತ್ಪನ್ನಗಳಾದ ಆಕ್ಸಿಜನ್, ವೆಂಟಿಲೇಟರ್ಗಳು, ಲಸಿಕೆ ಹಾಗೂ ಔಷಧಿಗಳ ಮೇಲೆ ತೆರಿಗೆ ಹೇರುವುದು ಕ್ರೌರ್ಯ ಹಾಗೂ ಸೂಕ್ಷ್ಮವಲ್ಲ" ಎಂದು ಕಿಡಿಕಾರಿದ್ದಾರೆ.
ಟ್ವೀಟ್ನಲ್ಲಿ ಕೊರೊನಾ ವಿರುದ್ದ ಹೋರಾಡಲು ಬಳಸುವ ಸಾಧನಗಳು ಹಾಗೂ ಅವುಗಳ ಮೇಲಿನ ಜಿಎಸ್ಟಿ ದರದ ಪಟ್ಟಿಯನ್ನು ಲಗತ್ತಿಸಿದ್ದಾರೆ.
"ಇಂದು ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೊರೊನಾ ವಿರುದ್ದ ಹೋರಾಟದಲ್ಲಿ ಬಳಸಲಾಗುವ ಎಲ್ಲಾ ಜೀವರಕ್ಷಕ ಔಷಧಿಗಳ ಹಾಗೂ ಪರಿಕರಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಬೇಕು" ಎಂದು ಆಗ್ರಹಿಸಿದ್ದಾರೆ.