ಚಾಮರಾಜನಗರ, ಮೇ.28 (DaijiworldNews/PY): "ಪ್ರಸ್ತುತ ನಮ್ಮ ಮುಂದೆ ಕೊರೊನಾ ನಿಯಂತ್ರಣದ ಗುರಿ ಇದೆ. ಈ ವಿಚಾರ ಬಿಟ್ಟು ನಾಯಕತ್ವದ ಬದಲಾವಣೆ ಸೇರಿದಂತೆ ಬೇರೆ ಯಾವ ಗುರಿಗಳಿಲ್ಲ" ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಸದ್ಯ ನಮ್ಮ ಮುಂದೆ ಕೊರೊನಾ ನಿಯಂತ್ರಣ ಗುರಿ ಇದೆ. ಇದನ್ನು ಬಿಟ್ಟು ಬೇರೆ ಯಾವುದೇ ಗುರಿ ಇಲ್ಲ. ಅಲ್ಲದೇ ಬೇರೆ ಯಾವುದೇ ಗುರಿ ಇಟ್ಟುಕೊಳ್ಳುವುದು ಸೂಕ್ತವಲ್ಲ" ಎಂದಿದ್ದಾರೆ.
ಕೊರೊನಾ ಸೋಂಕಿತರಿಗಾಗಿ ಬೆಂಗಳೂರಿನ ಲಯನ್ಸ್ ಕ್ಲಬ್, ಫ್ಯಾಮಿಲಿ ಆಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಉಚಿತ ಬಸ್ ಸೇವೆಗೆ ಸಚಿವ ಎಸ್ ಸುರೇಶ್ ಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, "ಬಸ್ನಲ್ಲಿ ಒಟ್ಟು ಎಂಟು ಆಕ್ಸಿಜನ್ ಕಾನ್ಸನ್ಟ್ರೇಟರ್ಗಳಿವೆ. ನಿತ್ಯವೂ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯ ಮುಂದೆ ಬಸ್ ಇರಲಿದೆ. ಆಕ್ಸಿಜನ್ ಬೆಡ್ ಖಾಲಿ ಇರದಂತ ಸಮಯದಲ್ಲಿ ಈ ಬಸ್ನಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಸೌಲಭ್ಯ ನೀಡಲಾಗುವುದು" ಎಂದು ತಿಳಿಸಿದ್ದಾರೆ.