ತೆಲಂಗಾಣ, ಮೇ.28 (DaijiworldNews/HR): ಕೊರೊನಾದಿಂದ ತಾಯಿ ಮೃತಪಟ್ಟಿದ್ದು, ತಾಯಿಯ ಆಶೀರ್ವಾದಕ್ಕಾಗಿ ಮಗ ಮೃತದೇಹದ ಎದುರಲ್ಲೇ ಸಪ್ತಪದಿ ತುಳಿದ ಮನಕಲಕುವ ಘಟನೆ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಮದುವೆ ಮೇ 21 ರಂದು ನಿಶ್ಚಯವಾಗಿದ್ದು, ಇದಕ್ಕಾಗಿ ಆತ ಅಮೇರಿಕಾದಿಂದ ಊರಿಗೆ ಬಂದಿದ್ದ 49 ವರ್ಷದ ತಾಯಿ ಕೊರೊನಾ ಸೋಂಕು ತಗುಲಿದ್ದರಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಿಸದೆ ರಾಕೇಶ್ ಮಾವ ಮೃತಪಟ್ಟು ಮದುವೆ ಮುಂದೂಡಲಾಗಿದದು, ಆ ಬಳಿಕ ಆತನ ತಾಯಿ ಕೂಡ ಕೊರೊನಾದಿಂದ ಮೃತಪಟ್ಟಿದ್ದು, ತಾಯಿಯ ಆಶೀರ್ವಾದ ಪಡೆದು ಮದುವೆಯಾಗಲು ಕಾಯುತ್ತಿದ್ದ ರಾಕೇಶ್ಗೆ ಮತ್ತೆ ಶಾಕ್ ಆಗಿದೆ.
ಇನ್ನು ಮೃತದೇಹವನ್ನು ಹೈದರಾಬಾದ್ ನಿಂದ ಊರಿಗೆ ತರಲಾಗಿದ್ದು, ಅಮ್ಮನ ಮೃತದೇಹದ ಎದುರಲ್ಲೇ ದುಃಖದ ಮಡುವಿನಲ್ಲಿ ರಾಕೇಶ್ ಮದುವೆಯಾಗಿದ್ದಾನೆ.
ತಾಯಿಯ ಆಶೀರ್ವಾದ ಪಡೆದು ಮದುವೆಯಾಗಬೇಕೆಂದು ಅಮೇರಿಕಾದಿಂದ ಬಂದಿದ್ದ ರಾಕೇಶ್ ಮೃತದೇಹದ ಎದುರು ಮದುವೆಯಾಗಬೇಕಾದ ಪರಿಸ್ಥಿತಿ ಬಂದಿದೆ.