ಬೆಂಗಳೂರು, ಮೇ 28(DaijiworldNews/MS): ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ಗುಂಪೊಂದು ಸಾಲದೆಂಬಂತೆ ಆಕೆಯನ್ನು ಖಾಸಗಿ ಭಾಗಕ್ಕೆ ಮದ್ಯದ ಬಾಟಲಿಯನ್ನು ತುರುಕಿ ವಿಕೃತಿ ಮೆರದಿದ್ದಾರೆ. ಅಲ್ಲದೆ ಆಕೆಯನ್ನು ಅಮಾನುಷವಾಗಿ ಥಳಿಸುವ, ಲೈಂಗಿಕವಾಗಿ ಹಲ್ಲೆ ನಡೆಸುವ, ಮುಖದ ಮೇಲೆ ಹತ್ತಿ ನಿಲ್ಲುವ ಅಮಾನವೀಯ ಕೃತ್ಯಗಳನ್ನು ಎಸಗುವ ವಿಡಿಯೋ ಮಾಡಿ ಹರಿಯಬಿಟ್ಟ ಘಟನೆ ತಡವಾಗಿ ರಾಜ್ಯ ರಾಜಧಾನಿಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಘಟನೆ ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರಾಮಮೂರ್ತಿ ನಗರದ ಎನ್ ಐ ಆರ್ ಲೇಔಟ್ ನಲ್ಲಿ ಕಳೆದ 10 ದಿನಗಳ ಹಿಂದೆ ನಡೆದಿದ್ದಾಗಿದೆ. ವೇಶ್ಯಾವಾಟಿಕೆಗೆ ತಳ್ಳಲು ಬಾಂಗ್ಲಾದೇಶದಿಂದ ನಗರಕ್ಕೆ ಕರೆತರಲಾಗಿದ್ದ 22 ವರ್ಷದ ಯುವತಿ ಮೇಲೆ, ಬಾಂಗ್ಲಾ ಮೂಲದವರೇ ಸಾಮೂಹಿಕ ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದಾರೆ
ಬಂಧಿತರನ್ನು ಬಾಂಗ್ಲಾ ಮೂಲದ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಬಾಂಗ್ಲಾ ಹಾಗೂ ಹೈದರಾಬಾದ್ ಮೂಲದ ಹಕೀಲ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ಇವರ ಪೈಶಾಚಿಕ ಕೃತ್ಯದ ವಿಡಿಯೋ ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ವೈರಲ್ ಆಗಿದ್ದು, ಅಲ್ಲಿ ಭಾರೀ ಚರ್ಚೆಗೊಳಗಾದ ನಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಬಳಿಕ ಎಲ್ಲ ವಿಡಿಯೋ ಮೂಲವನ್ನು ಜಾಲಾಡಿದಾಗ ವಿಡಿಯೋ ಅಪ್ ಲೋಡ್ ಆಗಿರುವುದು ಭಾರತದಿಂದ ಎನ್ನುವ ಗೊತ್ತಾಗಿದೆ
ಬಾಂಗ್ಲಾದೇಶದ ಪೊಲೀಸರು ಅಸ್ಸಾಂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಸ್ಸಾಂ ಪೊಲೀಸರು ಟವರ್ ಡಂಪ್ ಪತ್ತೆ ಮಾಡಿದ ಬೆಂಗಳೂರು ಎಂಬುದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಅಸ್ಸಾಂ ಪೊಲೀಸರು ಬೆಂಗಳೂರು ಕಮೀಷನರ್ ಕಮಲ್ ಪಂತ್ ಗೆ ಈ ಕುರಿತು ಮಾಹಿತಿ ನೀಡಿದ್ದು, ಬಳಿಕ ಪ್ರಕರಣವನ್ನು ಸಂದೀಪ್ ಪಾಟೀಲ್ ಗೆ ವರ್ಗಾವಣೆ ಮಾಡಿದ್ದಾರೆ. ಕೂಡಲೇ ಅಲರ್ಟ್ ಆದ ಸಂದೀಪ್ ಪಾಟೀಲ್ ಪಡೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಬಾಂಗ್ಲಾ ಮೂಲದ ಸಂತಸ್ತೆ ಸೇರಿದಂತೆ ಇನ್ನಿತರ ಕೆಲವರು ನಕಲಿ ದಾಖಲೆಗಳ ಮೇಲೆ ಪಡೆದುಕೊಂಡಿದ್ದ ಆಧಾರ್ ಕಾರ್ಡ್ ಸಹಿತ ಇನ್ನಿತರ ಭಾರತೀಯ ಗುರುತಿನ ಚೀಟಿ ಆಧಾರದ ಮೇಲೆ ದೇಶ ಪ್ರವೇಶಿಸಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬಂದು ಅವಲಹಳ್ಳಿ ಬಳಿಯ ಎನ್ಆರ್ಐ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಹಣಕಾಸಿನ ವಿಚಾರವಾಗಿ ನಡೆದ ಜಗಳದ ಬಳಿಕ ಆರೋಪಿಗಳು ಸಂತ್ರಸ್ತೆ ಮೇಲೆ ಈ ರೀತಿ ದೌರ್ಜನ್ಯವೆಸಗಿದ್ದಾರೆ. ಆರೋಪಿಗಳು ಈ ಕೃತ್ಯ ನಡೆಸುವ ವೇಳೆ ಮಹಿಳೆಯೊಬ್ಬಳು ಸಾಥ್ ನೀಡಿರುವುದು ದುರ್ದೈವ ಸಂಗತಿಯಾಗಿದೆ.