ಬೆಂಗಳೂರು, ಮೇ.27 (DaijiworldNews/PY): ಕೊರೊನಾ ಸೋಂಕಿತರ ಹೆಸರಿನಲ್ಲಿ ಬೆಡ್ ಬ್ಲಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಾರ್ರೂಂ ನೌಕರ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಾರ್ರೂ ನೌಕರ ವರುಣ್ ಆತನ ಸ್ನೇಹಿತಿ ಯಶವಂತ್ ಎಂದು ಗುರುತಿಸಲಾಗಿದೆ.
ಸೋಂಕಿನಿಂದ ಗುಣಮುಖವಾಗುತ್ತಿದ್ದ ಹಾಗೂ ಸಾವನ್ನಪ್ಪುತ್ತಿದ್ದ ಕೊರೊನಾ ಸೋಂಕಿತರ ಹಾಸಿಗೆಗಳ ಕುರಿತು ವರುಣ್ ಮಹಿತಿ ಪಡೆಯುತ್ತಿದ್ದ. ಬೆಡ್ ಬೇಕೆಂದು ವಾರ್ರೂಂಗೆ ಕರೆ ಮಾಡುತ್ತಿದ್ದ ಸೋಂಕಿತರ ಮಾಹಿತಿಯನ್ನು ಕೂಡಾ ದಾಖಲಿಸಿಕೊಳ್ಳುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ಮಾಹಿತಿಯನ್ನು ವರುಣ್ ಯಶವಂತ್ಗೆ ನೀಡುತ್ತಿದ್ದ. ನಂತರ ಯಶವಂತ್ ರೋಗಿಗಳನ್ನು ಸಂಪರ್ಕಿಸುತ್ತಿದ್ದು, ನಿಮಗೆ ವಾರ್ರೂಂನಿಂ ಹಾಸಿಗೆ ಸಿಗಲು ಹೆಚ್ಚಿನ ಸಮಯಾಗುತ್ತದೆ. ಹಣ ನೀಡಿದರೆ ಕೂಡಲೇ ಬೆಡ್ ವ್ಯವಸ್ಥೆ ಮಾಡಿಕೊಡಲಾಗುವುದು ಎನ್ನುತ್ತಿದ್ದ.
ಜೀವ ರಕ್ಷಣೆಗಾಗಿ ಸೋಂಕಿತರು ಹಾಗೂ ಅವರ ಕುಟುಂಬದವರು ಆರೋಪಿಗಳು ಹೇಳಿದಷ್ಟು ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಬಳಿಕ ಆರೋಪಗಳು ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡುತ್ತಿದ್ದರು ಎಂದು ಸಿಸಿಬಿ ಮೂಲಗಳು ಹೇಳಿವೆ.