ಉತ್ತರಪ್ರದೇಶ, ಮೇ 27 (DaijiworldNews/MS): ಉತ್ತರಪ್ರದೇಶದಲ್ಲಿ ಸೆಕ್ಸ್ ನಿರಾಕರಿಸಿದ ಪತ್ನಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರದಂದು ಮುಜಫರ್ ನಗರದ ಬೇಸಿಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ದೈಹಿಕ ಸಂಬಂಧವನ್ನು ನಿರಾಕರಿಸಿದ್ದರಿಂದ ಆರೋಪಿ ಪಪ್ಪು ಕುಮಾರ್ ಎಂಬಾತ ಪತ್ನಿ ಡಾಲಿ (36)ಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಮಾತ್ರವಲ್ಲದೆ ತನ್ನ ಮೂವರು ಮಕ್ಕಳಾದ ಸೋನಿಯಾ (5), ವಂಶ್ (3) ಮತ್ತು ಹರ್ಷಿತಾ (15 ತಿಂಗಳು) ಮಕ್ಕಳನ್ನು ಕಾಲುವೆ ಎಸೆದಿದ್ದಾನೆ.
ಕೃತ್ಯವೆಸಗಿದ ಬಳಿಕ ಸ್ಥಳೀಯರು ಮಾಹಿತಿ ತಿಳಿದು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಕಾರ್ಯಾಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧನದ ನಂತರ ಪಪ್ಪು ತನ್ನ ಹೆಂಡತಿಯನ್ನು ಕೊಂದು ತನ್ನ ಮಕ್ಕಳನ್ನು ಕಾಲುವೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. "ಇನ್ನೂ ಕಾಲುವೆಯಿಂದ ಶವಗಳನ್ನು ಪತ್ತೆ ಮಾಡಲಾಗಿಲ್ಲ" ಎಂದು ಪುರ್ಕಜಿ ಪೊಲೀಸ್ ಠಾಣೆಯ ಉಸ್ತುವಾರಿ ದೇಶರಾಜ್ ಸಿಂಗ್ ಹೇಳಿದ್ದಾರೆ