ಬೆಂಗಳೂರು, ಮೇ 27 (DaijiworldNews/MS): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ದ ಮಾತಿನ ಚಾಟಿಯೇಟು ನೀಡಿದ್ದು, ಗಾಂಭೀರ್ಯತೆ ಇಲ್ಲದ ಬಿಜೆಪಿಯೂ "ಮಾನವ ಮುಕ್ತ ಕರ್ನಾಟಕ" ಹಾಗೂ "ಯಡಿಯೂರಪ್ಪ ಮುಕ್ತ ಬಿಜೆಪಿ" ಮಾಡುವುದರಲ್ಲೇ ಚಿಂತಿತವಾಗಿದೆ ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ " ಬಿಜೆಪಿ ಪಕ್ಷ ಮಾಡುತ್ತಿರುವ ಚಟುವಟಿಕೆ ಎರಡೇ!ಒಂದು "ಮಾನವ ಮುಕ್ತ ಕರ್ನಾಟಕ"ಮತ್ತೊಂದು "ಯಡಿಯೂರಪ್ಪ ಮುಕ್ತ ಬಿಜೆಪಿ"! ಇವೆರಡರ ಹೊರತಾಗಿ ಬಿಜೆಪಿ ಚಿಂತಿಸುತ್ತಲೇ ಇಲ್ಲ. ಜನರ ಜೀವ ಉಳಿಸುವ ಗಾಂಭೀರ್ಯತೆ ಇಲ್ಲವೇ ಇಲ್ಲ ಎಂದು ಆರೋಪಿಸಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಉಲ್ಬಣಿಸುತ್ತಿರುವ ಶಿಲೀಂದ್ರ ರೋಗದ ಬಗ್ಗೆ ಚರ್ಚಿಸಲಲ್ಲ ,ಜನತೆಗೆ ಆರ್ಥಿಕ ನೆರವು ನೀಡುವುದಕ್ಕಲ್ಲ, ಕೇಂದ್ರದ ಅನ್ಯಾಯ ಪ್ರಶ್ನಿಸಲಲ್ಲ, ಕರೋನಾ ನಿಯಂತ್ರಣದ ಬಗ್ಗೆಚರ್ಚಿಸಲಲ್ಲ
ಬದಲಾಗಿ ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಲು! ಇಂತಹ ಅಯೋಗ್ಯ ಪಕ್ಷ ಅಧಿಕಾರದಲ್ಲಿರುವುದು ರಾಜ್ಯದ ದುರ್ದೈವ ಎಂದು ಹೇಳಿದೆ.
ರಾಜ್ಯವನ್ನು ಕೊರೊನಾ ಮುಕ್ತ ಕರ್ನಾಟಕ ಮಾಡುವುದು ಈಗಿನ ತುರ್ತು ಆದ್ಯತೆಯಾಗಬೇಕಿತ್ತು ಅದನ್ನು ಬಿಟ್ಟು ಬಿಜೆಪಿ ಅಧಿಕಾರಕ್ಕಾಗಿ ಬಣ ರಾಜಕೀಯದಲ್ಲಿ ಮುಳುಗಿ ಹೋಗಿದೆ.ರಾಜ್ಯದಲ್ಲಿ ಹತ್ತಾರು ಸೋಂಕುಗಳು ಕಾಣಿಸಿಕೊಂಡಿವೆ, ಜನತೆ ನರಳುತ್ತಿದ್ದಾರೆ, ವೈದ್ಯಕೀಯ ಸೌಲಭ್ಯಗಳಿಗೆ ಪರದಾಡುತ್ತಿದ್ದಾರೆ. ಇದೆಲ್ಲವನ್ನೂ ಮರೆತ ಬಿಜೆಪಿ ರಾಜಕೀಯದ ಆಟ ಆಡುತ್ತಿದೆ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದು ಆಕ್ಸಿಜನ್ ತರಲು ಅಲ್ಲ. ಕೇಂದ್ರದ ಅನ್ಯಾಯ ಪ್ರಶ್ನಿಸಲು ಅಲ್ಲ ಅಂಪೊಟರಿಸನ್ ಔಷಧ ತರಲಲ್ಲ. ಲಸಿಕೆ ಹಂಚಿಕೆ ತಾರತಮ್ಯ ಪ್ರಶ್ನಿಸಲಲ್ಲ. ರಾಜ್ಯದ ಜನತೆಗೆ ಲಸಿಕೆ ತರಲಲ್ಲ ಹೋಗಿದ್ದು ಕುರ್ಚಿ ಗುದ್ದಾಟಕ್ಕಾಗಿ, ದುರಿತ ಕಾಲದಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಲಜ್ಜೆ ಎಂಬುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.