ಲಂಡನ್, ಮೇ 26 (DaijiworldNews/SM): ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಕುಮಾರ್ ಸೇನ್ ಅವರಿಗೆ ಇದೀಗ ಮತ್ತೊಂದು ಗರಿಷ್ಠ ಪುರಸ್ಕಾರ ಲಭಿಸಿದೆ.
ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಸ್ಪೇನ್ನ ಅಗ್ರ ರಾಜಕುಮಾರಿ ಆಫ್ ಅಸ್ಟೂರಿಯಸ್ ಪ್ರಶಸ್ತಿ ನೀಡಲಾಗಿದೆ ಎಂದು ಸ್ಪ್ಯಾನಿಷ್ ಬಹುಮಾನ ಪ್ರತಿಷ್ಠಾನ ಬುಧವಾರ ತಿಳಿಸಿದೆ. ಈ ಪ್ರಶಸ್ತಿಗಾಗಿ 20 ದೇಶದ 41 ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಬಹುತೇಕ ಎಲ್ಲರನ್ನು ಹಿಂದಿಕ್ಕಿ ಸೇನ್ ಅವರು ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
'ಕ್ಷಾಮಗಳ ಬಗ್ಗೆ ಸಂಶೋಧನೆ, ಮಾನವ ಅಭಿವೃದ್ಧಿ ಸಿದ್ಧಾಂತ, ಕಲ್ಯಾಣ ಅರ್ಥಶಾಸ್ತ್ರ, ಬಡತನದ ಆಧಾರವಾಗಿರುವ ಕಾರ್ಯವಿಧಾನಗಳು, ಅನ್ಯಾಯ, ಅಸಮಾನತೆ, ರೋಗ ಮತ್ತು ಅಜ್ಞಾನದ ವಿರುದ್ಧದ ಹೋರಾಟವೇ ಸೇನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಪ್ರಮುಖ ವಿಚಾರಗಳಾಗಿವೆ ಎಂದು ಫೌಂಡೇಶನ್ ಹೇಳಿದೆ.