ಡೆಹ್ರಾಡೂನ್, ಮೇ.26 (DaijiworldNews/PY): ಭಾರತೀಯ ವೈದ್ಯಕೀಯ ಸಂಘದ ಉತ್ತರಾಖಂಡ್ ವಿಭಾಗ, ಬಾಬಾ ರಾಮ್ದೇವ್ ಅವರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮಾನನಷ್ಟ ಮಾಡಿದ್ದಕ್ಕಾಗಿ 1,000 ಕೋಟಿ ರೂ. ನೀಡಿ ಎಂದು ಆಗ್ರಹಿಸಿದೆ.
ಅಲೋಪತಿ ಅಷ್ಟೊಂದು ಪರಿಣಾಮಕಾರಿಯಲ್ಲ ಎಂದು ಬಾಬಾ ರಾಮ್ದೇವ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಉತ್ತರಾಖಂಡ್ ಐಎಂಎ ಉತ್ತರಾಖಂಡ್ ಮುಖ್ಯಮಂತ್ರಿ ತಿರಾಥ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರೆ ಬರೆದಿತ್ತು, ಈ ರೀತಿಯಾಗಿ ಹೇಳಿಕೆ ನೀಡಿದ್ದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿತ್ತು. ಈ ಬೆಳವಣಿಗೆಯ ಬಳಿಕ ಬಾಬಾ ರಾಮ್ದೇವ್ ಅವರು ಕೂಡಲೇ ಹೇಳಿಕೆ ವಾಪಾಸ್ಸು ಪಡೆದು, ಐಎಂಎಗೆ ಬೇರೆ 25 ಪ್ರಶ್ನೆಗಳನ್ನು ಕೇಳಿದ್ದರು.
ಇದೀಗ ಇನ್ನೊಂದು ರೀತಿಯಲ್ಲಿ ಬಾಬಾ ರಾಮ್ದೇವ್ ಅವರನ್ನು ತರಾಟೆಗೆ ತೆಗೆದುಕೊಂಡ ಐಎಂಎ, "ನೀವು ಹೇಳಿದ ಹೇಳಿಕೆ ತಪ್ಪು ಎಂದು ಸಂದೇಶ ರವಾನಿಸಬೇಕು. 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು. ಇದು ಸಾಧ್ಯವಿಲ್ಲದಿದ್ದಲ್ಲಿ 1,000 ಕೋಟಿ ರೂ. ನೀಡಿ" ಎಂದು ನೋಟಿಸ್ನಲ್ಲಿ ತಿಳಿಸಿದೆ.