ನವದೆಹಲಿ,ಮೇ 26 (DaijiworldNews/MS): ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ಉಂಟಾದ ಭೀತಿ ಸಾಕಾಗುವುದಿಲ್ಲ ಎಂಬಂತೆ, ಕೋವಿಡ್ -19 ಗೆ ಲಸಿಕೆ ಹಾಕಿದವರೆಲ್ಲರೂ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂಬ ಫ್ರೆಂಚ್ ವೈರಾಲಜಿಸ್ಟ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಅವರ ವೈರಲ್ ಹೇಳಿಕೆಯು ನೆಟಿಜನ್ಗಳನ್ನು ಬೆಚ್ಚಿಬೀಳಿಸಿದ್ದು ಭೀತಿ ಸೃಷ್ಟಿಸಿದೆ.
ಆದರೆ ಕೊರೊನಾ ಲಸಿಕೆ ಸ್ವೀಕರಿಸಿದವರು ಸಾವಿಗೀಡಾಗುತ್ತಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸುದ್ದಿಯೂ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಯಾವುದೇ ರೀತಿಯ ಲಸಿಕೆ ಪಡೆದವರು ಬದುಕುವ ಸಾಧ್ಯತೆ ಕಡಿಮೆ ಇದೆ ಕೊರೊನಾ ಲಸಿಕೆ ಪಡೆದವರು 2 ವರ್ಷದೊಳಗೆ ಅಸುನೀಗುತ್ತಾರೆ ಎಂದು ಫ್ರಾನ್ಸ್ ನೊಬೆಲ್ ಪುರಸ್ಕೃತ ಮೊಂಟಾನಿಯರ್ ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಈ ಸ್ಪಷ್ಟನೆ ನೀಡಿದೆ .
ಇದೊಂದು ಫೇಕ್ ಸುದ್ದಿಯಾಗಿದ್ದು ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಇದನ್ನು ಯಾರೂ ಫಾರ್ವರ್ಡ್ ಮಾಡಬೇಡಿ ಎಂದು ಹೇಳಿದೆ.