ಬೆಂಗಳೂರು, ಮೇ25 (DaijiworldNews/MS): ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸೋತಿದೆ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಆರೋಪಿಸಿದ್ದರು. ಈ ವಿಚಾರವಾಗಿ ರಾಜ್ಯ ಬಿಜೆಪಿಯೂ ವಿಪಕ್ಷ ನಾಯಕನ ವಿರುದ್ದ ಟ್ವಿಟರ್ ನಲ್ಲಿ ತರಾಟೆಗೆತ್ತಿಕೊಂಡಿದ್ದು, ಕೋವಿಡ್ ಸೋಂಕಿಗೆ ಹೆದರಿ ಮನೆಬಾಗಿಲು ಮುಚ್ಚಿಕೊಂಡು ಟ್ವೀಟರ್ನಲ್ಲಿ ಪ್ರವಚನ ನೀಡುವವರಿಗೆ ಭಾವನೆಗಳ ಬೆಲೆ ಗೊತ್ತಿರಲು ಸಾಧ್ಯವಿಲ್ಲ ಎಂದು ಹೇಳಿದೆ.
ಸರಣಿ ಟ್ವಿಟ್ ಮಾಡಿರುವ ಬಿಜೆಪಿಯೂ ಬಾದಾಮಿ ಶಾಸಕ ಸಿದ್ದರಾಮಯ್ಯ ಕನಸಿನಲ್ಲಿ ಹೊಟ್ಟೆ ತುಂಬ ತಿಂದು ಎಚ್ಚರವಾದ ಮೇಲೆ ತೇಗುವ ವಿಚಿತ್ರ ಹವ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪಕ್ಷದ ಲಸಿಕೆ ನಿಧಿ ಸಂಗ್ರಹ ನಾಟಕವೂ ಹಾಗೆಯೇ ಆಗಿದೆ. ಇಲ್ಲದೇ ಇರುವ ದುಡ್ಡನ್ನು ಕೊಡುತ್ತೇವೆ ಎಂದು ಬಡಾಯಿ ಕೊಚ್ಚಿ ಈಗ ಸರ್ಕಾರದ ಬಳಿ ಅನುದಾನ ಬೇಡುತ್ತಿರುವುದೇಕೆ? ಪ್ರಶ್ನಿಸಿದ್ದಾರೆ.
ಕಣ್ಣೀರು ಹಾಕಿದರೆ ಆಕ್ಸಿಜನ್, ಲಸಿಕೆ ಸಿಗುವುದಿಲ್ಲ ಎಂದು ದೇಶದ ಪ್ರಧಾನಿ ಬಗ್ಗೆ ವ್ಯಂಗ್ಯವಾಡುವ ಸಿದ್ದರಾಮಯ್ಯ ಅವರಿಗೆ ತಾವು ಗಾಜಿನಮನೆಯಲ್ಲಿ ಕುಳಿತಿರುವುದು ಮರೆತು ಹೋಗಿದೆ, ಕೋವಿಡ್ ಸೋಂಕಿಗೆ ಹೆದರಿ ಮನೆಬಾಗಿಲು ಮುಚ್ಚಿಕೊಂಡು ಟ್ವೀಟರ್ನಲ್ಲಿ ಪ್ರವಚನ ನೀಡುವವರಿಗೆ ಭಾವನೆಗಳ ಬೆಲೆ ಗೊತ್ತಿರಲು ಸಾಧ್ಯವಿಲ್ಲ. ಅಂಗಳ ಅಳೆಯಲು ಅಸಾಧ್ಯರಾದವರಿಗೆ ಆಕಾಶ ಅಳೆಯುವ ತೆವಲು. ಕಾಂಗ್ರೆಸ್ ಸಲ್ಲಿಸಿದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದ ಮೇಲೂ ಸಿದ್ದರಾಮಯ್ಯ ಅವರಿಗೆ ಅವರಿಗೆ ಬುದ್ಧಿ ಬಂದಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
ಲಸಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂಬುದು ಸಿದ್ದರಾಮಯ್ಯ ಅವರ ಬೂಟಾಟಿಕೆಯ ಪರಮಾವಧಿಯಲ್ಲದೆ ಮತ್ತೇನಲ್ಲ. ಮಾರಣಾಂತಿಕ ಕಾಯಿಲೆಗೆ ಔಷಧ ಇಲ್ಲ ಎಂದರೆ ಅದು ಕೊಲೆಗೆ ಸಮಾನ ಎಂದು ಸೆಕ್ಷನ್ ಸ್ಪೆಷಲಿಸ್ಟ್ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.