ನವದೆಹಲಿ, ಮೇ25 (DaijiworldNews/MS): 18-44 ವರ್ಷ ವಯಸ್ಸಿನವರಿಗೆ ಲಸಿಕೆ ಪಡೆಯಲು ಕೋವಿನ್ ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡದೇ ಲಸಿಕೆ ಕೇಂದ್ರಕ್ಕೆ ತೆರಳಿ ಅಲ್ಲೇ ನೋಂದಣಿ ಮಾಡಲು ಅವಕಾಶ ಕಲ್ಪಿಸಿದೆ.
ಅನ್ ಲೈನ್ ನೋಂದಣಿ ಮಾಡಿದವರಿಗೆ ಮೊದಲು ಅವಕಾಶ ಕಲ್ಪಿಸಿ ಬಳಿಕ ನೋಂದಣಿ ಮಾಡದೇ ಬಂದವರಿಗೆ ದಿನದ ಆಂತ್ಯದಲ್ಲಿ ಹೆಚ್ಚುವರಿಯಾಗಿ ಉಳಿದ ಲಸಿಕೆಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಇದರಿಂದ ಲಸಿಕೆ ಪೋಲಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಕೇಂದ್ರ ಹೇಳಿದೆ.
ದಿನದ ಅಂತ್ಯದ ವೇಳೆಗೆ, ಆನ್ಲೈನ್ ನೋಂದಣಿ ಮಾಡಿಸಿಕೊಂಡವರು ಯಾವುದೋ ಕಾರಣದಿಂದ ಹಾಜರಾಗದಿದ್ದಲ್ಲಿ ಅಂತಹ ಸಂದರ್ಭಗಳಲ್ಲಿ, ಕೆಲವರ ಆನ್-ಸೈಟ್ ನೋಂದಣಿ ಮಾಡಿ ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ನೀಡಬಹುದಾಗಿದೆ "ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹೀಗಿದ್ದರೂ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ನಿರ್ಧಾರವನ್ನು ಆಯಾ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶದಗಳಿಗೆ ಬಿಟ್ಟುಬಿಡಲಾಗಿದೆ. ಜೊತೆಗೆ ಸರಕಾರಿ ಕೇಂದ್ರಗಳಲ್ಲಿ ಮಾತ್ರವೇ ಈ ಸೌಲಭ್ಯವಿದ್ದು, ಖಾಸಗಿಯಲ್ಲಿ ಇರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. 45 ವರ್ಷ ದಾಟಿದವರಿಗೆ ಈಗಲೂ ಸ್ಥಳದಲ್ಲೇ ನೋಂದಣಿ ಮಾಡುವ ಅವಕಾಶವಿದೆ.