ದೆಹಲಿ, ಮೇ.24 (DaijiworldNews/HR): ದೇಶದಲ್ಲಿ ಕೊರೊನಾದೊಂದಿಗೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ನಂತಹ ಖಾಯಿಲೆಗಳು ದೇಹಸೇರುತ್ತಿದ್ದು, ಇದೀಗ ಮತ್ತೊಂದು ಸಮಸ್ಯೆ ಕಂಡುಬಂದಿದೆ. ದೇಶದಲ್ಲಿ ಮೊತ್ತ ಮೊದಲ ಯೆಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಘಾಜಿಯಾಬಾದ್ನಲ್ಲಿ ಸೋಮವಾರ ಮೊದಲ ಯೆಲ್ಲೋ ಫಂಗಸ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬ್ಲ್ಯಾಕ್ ಮತ್ತು ವೈಟ್ ಫಂಗಸ್ಗಳಿಗಿಂತ ಯೆಲ್ಲೋ ಫಂಗಸ್ ಹೆಚ್ಚು ಅಪಾಯಕಾರಿ ಎಂಬ ಮಾಹಿತಿ ಲಭ್ಯವಾಗಿದ್ದು, ಆಲಸ್ಯ, ತೂಕ ಇಳಿಕೆಯಾಗುವುದು, ಹಸಿವು ಕಡಿಮೆ ಇರುವುದು ಅಥವಾ ಹಸಿವೆಯೇ ಆಗದಿರುವುದು ಯೆಲ್ಲೋ ಫಂಗಸ್ನ ಲಕ್ಷಣಗಳಾಗಿರಲಿವೆ.
ಇನ್ನು ದೇಹದಲ್ಲಿ ಗಾಯಗಳಿದ್ದರೆ ಗುಣವಾಗುವ ಪ್ರಮಾಣ ಯೆಲ್ಲೋ ಫಂಗಸ್ನಿಂದಾಗಿ ಕಡಿಮೆ ಆಗುವ ಸಾಧ್ಯತೆಯಿದ್ದು, ಅಂಗಾಂಗ ವೈಫಲ್ಯ ಅಥವಾ ಕಣ್ಣುಗಳ ಸಮಸ್ಯೆ ಕಂಡುಬರಬಹುದಾಗಿದೆ.
ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದ್ದು, ಯೆಲ್ಲೋ ಫಂಗಸ್ನ್ನು ಕಡೆಗಣಿಸಬಾರದು, ಯೆಲ್ಲೋ ಫಂಗಸ್ಗೆ ಕೂಡ ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಔಷಧವಾಗಿದೆ.
ಇನ್ನು ಸ್ವಚ್ಛತೆ ಇಲ್ಲದಿರುವುದು, ಅತಿಯಾದ ತೇವಾಂಶ ಇತ್ಯಾದಿ ಯೆಲ್ಲೋ ಫಂಗಸ್ಗೆ ಕಾರಣವಾಗಬಹುದು ಎನ್ನಲಾಗಿದೆ.