ನವದೆಹಲಿ, ಮೇ.24 (DaijiworldNews/HR): "18 ರಿಂದ 44 ವರ್ಷದವರಿಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 1.80 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ ಮತ್ತೆ 48 ಲಕ್ಷ ಡೋಸ್ ಲಸಿಕೆ ನೀಡಲಾಗುವುದು" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ, "ಇಲ್ಲಿಯವರೆಗೆ ಉಚಿತವಾಗಿ ಮತ್ತು ನೇರವಾಗಿ ರಾಜ್ಯಗಳ ಖರೀದಿ ವಿಭಾಗದ ಮೂಲಕ 21.80 ಕೋಟಿಗೂ ಅಧಿಕ ಲಸಿಕೆಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ" ಎಂದಿದೆ.
ಇನ್ನು ವ್ಯರ್ಥವಾದ ಲಸಿಕೆ ಸೇರಿದಂತೆ 2021ರ ಮೇ 23 ರವರೆಗೆ ಒಟ್ಟು 20,00,08,875 ಡೋಸ್ ಲಸಿಕೆ ಬಳಸಿಕೊಳ್ಳಲಾಗಿದೆ ಎಂದಿದೆ.
ಮೇ 1 ರಿಂದ ಆರಂಭವಾದ 18 ರಿಂದ 44 ವರ್ಷದವರ ಲಸಿಕೆ ಅಭಿಯಾನಕ್ಕೆ ಒಂದು ಕೋಟಿ ಡೋಸ್ ಗಿಂತ ಅಧಿಕ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.