ನವದೆಹಲಿ, ಮೇ 24 (DaijiworldNews/MS): ಔಷಧ ಉತ್ಪಾದನಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ರೋಚೆ ಇಂಡಿಯಾ ಮತ್ತು ಸಿಪ್ಲಾ ಸಂಸ್ಥೆಯೂ ಕೋವಿಡ್-19 ವಿರುದ್ಧ ಚಿಕಿತ್ಸೆಗಾಗಿ ರೋಚೆಸ್ ಆಂಟಿಬಾಡಿ ಕಾಕ್ಟೇಲ್ ನ್ನು ಅನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ಘೋಷಿಸಿದ್ದಾರೆ.
ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಡೋಸ್ ಔಷಧದ ಬೆಲೆ 59 ಸಾವಿರದ 750 ರೂಪಾಯಿ ಇರಲಿದೆ. "ಆಂಟಿಬಾಡಿ ಕಾಕ್ಟೇಲ್ ( ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ) ನ ಬ್ಯಾಚ್ ಈಗ ಭಾರತದಲ್ಲಿ ಲಭ್ಯವಿದ್ದು, ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಲಭ್ಯವಾಗಲಿದೆ.
ಭಾರತದಲ್ಲಿ ಲಭ್ಯವಾಗಲಿರುವ ತಲಾ ಒಂದು ಲಕ್ಷ ಪ್ಯಾಕ್ಗಳಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುವುದರಿಂದ ಒಟ್ಟಾರೆಯಾಗಿ ಅವರು 2 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಕಂಪೆನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ .
ಪ್ರಮುಖ ಆಸ್ಪತ್ರೆಗಳು ಮತ್ತು ಕೊವೀಡ್ ಚಿಕಿತ್ಸಾ ಕೇಂದ್ರಗಳ ಮೂಲಕ ಔಷಧಿ ಲಭ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರತಿ ರೋಗಿಯ ಡೋಸ್ಗೆ ಬೆಲೆ [ಒಟ್ಟು 1,200 ಮಿಗ್ರಾಂ (600 ಮಿಗ್ರಾಂ ಕ್ಯಾಸಿರಿವಿಮಾಬ್ ಮತ್ತು 600 ಮಿಗ್ರಾಂ ಇಮ್ಡೆವಿಮಾಬ್)] ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 59,750 ರೂ ಆಗಿರುತ್ತದೆ. ಮಲ್ಟಿ ಡೋಸ್ ಪ್ಯಾಕ್ನ ಗರಿಷ್ಠ ಚಿಲ್ಲರೆ ಬೆಲೆ (ಪ್ರತಿ ಪ್ಯಾಕ್ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲದು) ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 1,19,500 ರೂಪಾಯಿಗಳಾಗಿರುತ್ತದೆ.