ಚಾಮರಾಜನಗರ, ಮೇ.24 (DaijiworldNews/HR): ಕೊಳ್ಳೆಗಾಲದ ಯುವತಿಯೊಬ್ಬಳು ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗುವ ಮೂಲಕ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾಳೆ.
ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆದ ಯುವತಿಯನ್ನು ಕೊಳ್ಳೆಗಾಲದ ಆಶ್ರಿತಾ ಒಲೆಟಿ ಎಂದು ಗುರುತಿಸಲಾಗಿದೆ.
ಈಕೆ ಚಾಮರಾಜನಗರದ ಕೊಳ್ಳೇಗಾಲದಲ್ಲಿನ ನಿವೃತ್ತ ಸೈನಿಕ ಗಂಗಾಧರ್ ಅವರ ಪುತ್ರಿಯಾಗಿದ್ದು, ಇಡೀ ಪ್ರಪಂಚದಲ್ಲೇ 7 ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಭಾರತದ ಪ್ರತಿಷ್ಠಿತ ಏರ್ ಪೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್ನಿಂದ ಇಂಜಿನಿಯರಿಂಗ್ ಪದವಿ ಪಡೆದಿದದು, ಈ ಸ್ಕೂಲ್ 1976ರಲ್ಲಿ ಸ್ಥಾಪನೆಯಾಗಿದ್ದರೂ, ಈವರೆಗೆ 275 ಜನರು ಮಾತ್ರವೇ ಇಂತಹ ಇಂಜಿನಿಯರಿಂಗ್ ಕೋರ್ಸ್ ಪದವಿ ಪಡೆದಿದ್ದಾರೆ.
ಇನ್ನು ಈ ಪದವಿಯನ್ನು ಅತ್ಯಂತ ಕಠಿಣ ತರಬೇತಿ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದ ಆಶ್ರಿತಾ ಒಲೆಟಿ ಈಗ ವಾಯುದಳದ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.