ಪಾಟ್ನಾ, ಮೇ.24 (DaijiworldNews/HR): ಪಾಟ್ನಾದ ಬಿಹಾರದ ಬಂಕಾ ಜಿಲ್ಲೆಯಲ್ಲಿ ಪ್ರೀತಿಯಲ್ಲಿ ಬಿದ್ದ ಅಣ್ಣ, ತಂಗಿ ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಪತ್ರ ಬರೆದಿಟ್ಟುಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಆತ್ಮಹತ್ಯೆ ಮಾಡಿಕೊಂದವರನ್ನು 16 ವರ್ಷದ ಹುಡುಗಿ ಹಾಗೂ 18 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ಈ ಇಬ್ಬರು ಸಂಬಂಧದಲ್ಲಿ ಅಣ್ಣ- ತಂಗಿ ಆಗಬೇಕು, ಆದರೆ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿದ್ದು, ಈ ವಿಚಾರ ಮನೆಯವರಿಗೆ ತಿಳಿದಿದೆ. ಆಗ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಅಣ್ಣ- ತಂಗಿ ನಡುವೆ ಪ್ರೀತಿ ಹುಟ್ಟಿರುವ ವಿಷಯ ತಿಳಿದ ಕುಟುಂಬಸ್ಥರು ಯುವಕನನ್ನು ಕೋಲ್ಕತ್ತಾಗೆ ಕಳುಹಿಸಿ, ಇತ್ತ ಮದುವೆ ನಿಮಿತ್ತ ಹುಡುಗಿಯ ಕುಟುಂಬಸ್ಥರು ಆಕೆ ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಿದ್ದರು.
ಈ ವಿಚಾರ ತಿಳಿದ ಯುವಕ ನೇರವಾಗಿ ಹುಡುಗಿಯ ಮನೆಗೆ ಬಂದಿದ್ದು, ಆಕೆಯನ್ನು ಕರೆದುಕೊಂಡು ಹೋಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಈ ಜನ್ಮದಲ್ಲಿ ಅಣ್ಣ-ತಂಗಿಯಾಗಿದ್ದೇವೆ, ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗಿ ಹುಟ್ಟುತ್ತೇವೆ ಎಂದು ಪತ್ರವೊಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ.