ನವದೆಹಲಿ, ಮೇ 24 (DaijiworldNews/MS): ಚೀನಾದಲ್ಲಿ ಹುಟ್ಟಿ ಶರವೇಗದಲ್ಲಿ ವಿಶ್ವದ 220 ರಾಷ್ಟ್ರಗಳನ್ನು ಆವರಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್ ಸವಾಲೆಸೆದಿದೆ ಪ್ರಪಂಚದಾದ್ಯಂತ ಕೊರೊನಾದ ಎರಡನೇ ಅಲೆ ಹೆಚ್ಚು ಪರಿಣಾಮ ಬೀರುತ್ತಿದ್ದು ಸಕ್ರಿಯ ಸೋಂಕಿತರ ಪ್ರಕರಣ ಹೆಚ್ಚಳದ ಜೊತೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಏರಿಕೆಯಾಗಿದೆ.
ಭಾರತದಲ್ಲಿ ಇಲ್ಲಿವರೆಗೆ 3 ಲಕ್ಷ ಜನ ಸಾವನ್ನಪ್ಪಿದ್ದು, ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೇರಿಕಾ ನಂತರದ ಸ್ಥಾನದಲ್ಲಿ ಬ್ರೆಜಿಲ್ ದೇಶಗಳು ಇವೆ. ಭಾರತ, ಸೇರಿ ವಿಶ್ವದಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
2,40,842 ಹೊಸ ಕೋವಿಡ್ ಪ್ರಕರಣಗಳೊಂದಿಗೆ, ಭಾರತದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,65,30,132 ಕ್ಕೆ ಏರಿದೆ. 24 ಗಂಟೆಗಳಲ್ಲಿ 3,741 ಸಾವುಗಳು ವರದಿಯಾಗಿವೆ.ಅಮೇರಿಕಾದಲ್ಲಿ 33,105,188 ಪ್ರಕರಣಗಳು, 5, 89,703 ಸಾವುಗಳು ಸಂಭವಿಸಿವೆ. ಮತ್ತು ಬ್ರೆಜಿಲ್ ನಲ್ಲಿ 16,047,439 ಪ್ರಕರಣಗಳಿಂದ 448,208 ಸಾವುಗಳು ಸಂಭವಿಸಿವೆ.
2019ರ ಡಿಸೆಂಬರ್ನಲ್ಲಿ ಚೀನಾದಲ್ಲಿ ಹುಟ್ಟಿದ ಮಹಾಮಾರಿಗೆ ಇಲ್ಲಿಯವರೆಗೆ ಪ್ರಪಂಚದಾದ್ಯಂತ ಬರೋಬ್ಬರಿ 16.7 ಕೋಟಿ ತುತ್ತಾಗಿದ್ದಾರೆ. ಇವರಲ್ಲಿ ವೈರಸ್ಗೆ ತುತ್ತಾಗಿ ಸುಮಾರು 34.6 ಲಕ್ಷ ಜನರು ಸಾವನ್ನಪ್ಪಿದ್ದಾರೆ.