ಡುಮ್ಕಾ, ಮೇ.23 (DaijiworldNews/HR): ಐದು ವರ್ಷದ ಬಾಲಕನಾಗಿದ್ದಾಗ ಮನೆಯಿಂದ ದೂರವಾಗಿದ್ದಾತ 13 ವರ್ಷಗಳ ಬಳಿಕ ಈಗ ಮನೆ ಸೇರಿದ್ದಾನೆ.
ಸಾಂಧರ್ಭಿಕ ಚಿತ್ರ
ದೀಪಕ್ ದೆಹ್ರಿ ಎಂಬಾತನಿಗೆ ಈ ಗ ಹದಿನೆಂಟು ವರ್ಷ ಆತ 5 ವರ್ಷದ ಬಾಲಕನಾಗಿದ್ದಾಗ ತನ್ನ ಕುಟುಂದವರಿಂದ ಬೇರ್ಪಟ್ಟಿದ್ದ. ಆದರೆ ವಿಡಿಯೊ ಕರೆಯ ಸಹಾಯದಿಂದ ತನ್ನ ಗ್ರಾಮವನ್ನು ಪತ್ತೆ ಮಾಡಿದ್ದಾನೆ.
ಜಾರ್ಖಂಡ್ದ ಪಹರಿಯಾ ಪ್ರಾಚೀನ ಬುಡಕಟ್ಟು ಸಮುದಾಯಕ್ಕೆ ಸೇರಿದ ದೀಪಕ್, ಐದು ವರ್ಷದ ಬಾಲಕನಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದು, ಈ ಬಳಿಕ ತಾಯಿಯೂ ಅವನನ್ನು ತ್ಯಜಿಸಿದ್ದರು. ಆಗ ದೀಪಕ್ನ ಚಿಕ್ಕಮ್ಮ ಆತನನ್ನು ಉತ್ತರ ಪ್ರದೇಶದ ಹರ್ದೊರಿಗೆ ಕರೆದುಕೊಂಡಿದ್ದರು. ಆ ವೇಳೆ ದೀಪಕ್ ಮನೆಗೆ ಹೋಗಲೆಂದು ಚಿಕ್ಕಮ್ಮನ ಕೈತಪ್ಪಿಸಿ ಓಡಿಹೋಗಿದ್ದ. ಆದರೆ, ಜಾರ್ಖಂಡ್ ಬದಲು ಆತ ರಾಜಸ್ಥಾನದ ಬಿಕನೇರ್ಗೆ ಹೋಗುವ ರೈಲಿಗೆ ಹತ್ತಿದ್ದ ಎಂದು ಮಸಂಜೂರು ಪೊಲೀಸ್ ಠಾಣೆಯ ಅಧಿಕಾರಿ ಚಂದ್ರಶೇಖರ್ ದುಬೆ ತಿಳಿಸಿದರು.
ಇನ್ನು ಬಿಕಾನೇರ್ನ ಸಮಾಜ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿ ದೀಪಕ್ 13 ವರ್ಷಗಳನ್ನು ಕಳೆದಿದ್ದು, ದೀಪಕ್ ಅನೇಕ ಬಾರಿ ಭಾವೋದ್ವೇಗಕ್ಕಾಗಿ ಒಳಗಾಗಿ ತನ್ನ ಬಾಲ್ಯದ ನೆನಪುಗಳನ್ನು ಹೇಳುತ್ತಿದ್ದ. ಜೊತೆಗೆ ಗ್ರಾಮದ ವಿವರಗಳನ್ನು ನೀಡುತ್ತಿದ್ದ. ಈ ವಿವರಗಳ ಆಧಾರದ ಮೇಲೆ ಬಾಲಮಂದಿರದ ಅಧೀಕ್ಷಕ ಅರವಿಂದ್ ಆಚಾರ್ಯ ಅವರು, ಮಸಂಜೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೊ ಕರೆಯ ಮೂಲಕ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಕ್ಗೆ ತೋರಿಸಿದ್ದು, ಈ ವೇಳೆ ತನ್ನ ಮನೆ ಬಳಿಯಿದ್ದ ಮಸ್ಸಾಂಜೊರ್ ಅಣೆಕಟ್ಟನ್ನು ದೀಪಕ್ ಗುರುತಿಸಿದ್ದಾನೆ ಎನ್ನಲಾಗಿದೆ.
ದೀಪಕ್ನನ್ನು ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಕಾನೇರ್ ಪೊಲೀಸರು ಆತನ ಕುಟುಂಬದವರಿಗೆ ಒಪ್ಪಿಸಿದ್ದಾರೆ.