ನವದೆಹಲಿ, ಮೇ.23 (DaijiworldNews/HR): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಲ್ಲಿಯವರೆಗೆ 21.80 ಕೋಟಿ ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಸಿದ್ದು,ಇನ್ನೂ 1.90 ಕೋಟಿ ಡೋಸ್ ಕೊರೊನಾ ಲಸಿಕೆದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಾಂಧರ್ಭಿಕ ಚಿತ್ರ
"ವ್ಯರ್ಥ ಲಸಿಕೆ ಸೇರಿದಂತೆ 2021ರ ಮೇ 22ರವರೆಗೆ ಒಟ್ಟು 19,90,31,577 ಡೋಸ್ ಲಸಿಕೆ ಬಳಸಿಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದ್ದು, 1.90 ಕೋಟಿಗಿಂತಲೂ ಹೆಚ್ಚು ಡೋಸ್ ಲಸಿಕೆ ಇನ್ನೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ" ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಭಾರತದಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 2.40 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ.