ನವದೆಹಲಿ, ಮೇ.23 (DaijiworldNews/PY): "ಮಕ್ಕಳ ಮೇಲೆ ಕೊರೊನಾ ಎರಡನೇ ಅಲೆ ಹೆಚ್ಚು ಪ್ರಭಾವ ಬೀರುತ್ತಿರುವ ಹಿನ್ನೆಲೆ ಸಿಬಿಎಸ್ಇಯ 12ನೇ ತರಗತಿ ಪರೀಕ್ಷೆಗಳನ್ನು ನಡೆಸಬಾರದು" ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾ ಎರಡನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಈಗಾಗಲೇ ಮಕ್ಕಳು ಒತ್ತಡದಲ್ಲಿದ್ದು, ಸುರಕ್ಷತಾ ಕಿಟ್ಗಳನ್ನು ಧರಿಸಿ ಪರೀಕ್ಷೆ ಬರೆಯಬೇಕು ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಇದು ಸರಿಯಲ್ಲ" ಎಂದಿದ್ದಾರೆ.
"ಈ ಬಗ್ಗೆ ನಾನು ಮೊದಲೇ ಹೇಳಿದ್ದೆ. ಈಗ ಮತ್ತೆ ಅದನ್ನೇ ಹೇಳುತ್ತಿದ್ದೇನೆ. ನಮಗೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ತುಂಬಾ ಮುಖ್ಯ. ನಾವು ಈ ಹಿಂದಿನ ಘಟನೆಗಳಿಂದ ಏಕೆ ಪಾಠ ಕಲಿಯುತ್ತಿಲ್ಲ?" ಎಂದು ಕೇಳಿದ್ದಾರೆ.
"ಈಗಾಗಲೇ ಮಕ್ಕಳ ಒತ್ತಡದಲ್ಲಿದ್ದಾರೆ. ಈ ಮಧ್ಯೆ ಸರ್ಕಾರ ಪರೀಕ್ಷೆಗೆ ಸಂಬಂಧಪಟ್ಟ ತೀರ್ಮಾನ ಪ್ರಕಟಿಸುವಲ್ಲಿ ಕೂಡಾ ವಿಳಂಬ ಮಾಡುತ್ತಿದೆ" ಎಂದಿದ್ದಾರೆ.