ಅಯೋಧ್ಯೆ, ಮೇ.23 (DaijiworldNews/HR): ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕನೇ ಹತ್ಯೆ ಮಾಡಿರುವ ಘಟನೆ ಅಯೋಧ್ಯೆಯ ಇನಾಯತ್ನಗರ ಪ್ರದೇಶದ ಮಜ್ರೆ ಗ್ರಾಮದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಹತ್ಯೆ ಮಾಡಿರುವ ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ.
ಆರೋಪಿಯು ತನ್ನ ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಮೂವರು ಅಪ್ರಾಪ್ತ ಸಹೋದರರನ್ನೇ ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಎಸ್ಎಸ್ಪಿ ಶೈಲೇಶ್ ಪಾಂಡೆ ಭಾನುವಾರ ಹೇಳಿದ್ದಾರೆ.
ಮೃತರನ್ನು ರಾಕೇಶ್ ಕಹಾರ್, ಅವರ ಪತ್ನಿ ಜ್ಯೋತಿ ಮತ್ತು ಅವರ 4, 6 ಮತ್ತು 8 ವರ್ಷದ ಮೂವರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.
ಇನ್ನು ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಈ ಹತ್ಯೆಗಳು ನಡೆದಿವೆ ಎಂದು ಡಿಎಂ ಅನಿಜ್ ಕುಮಾರ್ ಅವರು ತಿಳಿಸಿದ್ದಾರೆ.
ಆರೋಪಿ ಪವನ್ ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.