ಗುವಾಹಟಿ, ಮೇ.23 (DaijiworldNews/HR): ಅಸ್ಸಾಂನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 6 ಡಿಎನ್ಎಲ್ಎ ಉಗ್ರರನ್ನು ಹತ್ಯೆಗೈದ ಘಟನೆ ರವಿವಾರ ನಡೆದಿದೆ.
ಸಾಂಧರ್ಭಿಕ ಚಿತ್ರ
ಅಸ್ಸಾಂನ ಕಾರ್ಬಿ ಆಂಗ್ಲಾಂಗ್, ಹಸಾವೊ ಜಿಲ್ಲೆಗಳಲ್ಲಿ ಮತ್ತು ನೆರೆಯ ನಾಗಾಲ್ಯಾಂಡ್ ನ ಕೆಲ ಭಾಗಗಳಲ್ಲಿ ಡಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ(ಡಿಎನ್ಎಲ್ಎ) ಗುಂಪಿನ ಉಗ್ರರು ಸಕ್ರಿಯರಾಗಿದ್ದರು ಎನ್ನಲಾಗಿದೆ.
ತಡರಾತ್ರಿಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಇದೀಗ 6 ಉಗ್ರರನ್ನು ಹತ್ಯೆಗೈದಿದೆ.
ಇನ್ನು ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಸ್ಸಾಂ ವಿಶೇಷ ಡಿಜಿ ಜಿಪಿ ಸಿಂಗ್ ಮಾಹಿತಿ ನೀಡಿದ್ದಾರೆ.