ಮೈಸೂರು, ಮೇ.23 (DaijiworldNews/PY): "ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಉತ್ತಮವಾಗಿದೆ. ಇನ್ನೂ ಎರಡು ವರ್ಷ ಅವರೇ ಸಿಎಂ" ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರ ಆಡಳಿತ ಉತ್ತಮವಾಗಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂಬರು ಚುನಾವಣೆ ಕೂಡಾ ಸಿಎಂ ಬಿಎಸ್ವೈ ಅವರ ನೇತೃತ್ವದಲ್ಲೇ ನಡೆಯುಲಿದೆ. ಸಿಎಂ ಬದಲಾವಣೆ ವಿಚಾರ ಕೇವಲ ವದಂತಿಯಷ್ಟೇ" ಎಂದಿದ್ದಾರೆ.
ಆಕ್ಸಿಜನ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಇದೆ. ಆದರೆ ಆಕ್ಸಿಜನ್ ಅನ್ನು ಶೇಖರಿಸಲು ಕಂಟೇನರ್ಗಳ ಕೊರತೆ ಇದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೇಂದ್ರದಿಂದ ಕೂಡಾ ಆಕ್ಸಿಜನ್ ಪೂರೈಕೆಯಾಗುತ್ತಿದೆ "ಎಂದು ಹೇಳಿದ್ದಾರೆ.
"ಪ್ರತಿನಿತ್ಯ ಗುಲ್ಬರ್ಗದಲ್ಲಿ 500 ಕಂಟೇನರ್ ಆಕ್ಸಿಜನ್ ತಯಾರಿಸು ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಆಕ್ಸಿಜನ್ ಸಿಲಿಂಡರ್ಗಳ ಕೊರತೆ ನಿವಾರಣೆಯಾಗಲಿದೆ" ಎಂದಿದ್ದಾರೆ.