ಗದಗ, ಮೇ.23 (DaijiworldNews/PY): "ಲಾಕ್ಡೌನ್ನಿಂದ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಪಾಸಿಟಿವಿಟಿ ರೇಟ್ ಶೇ.24ಕ್ಕೆ ಬಂದಿದ್ದು, ಲಾಕ್ಡೌನ್ ಉಪಕಾರಿಯಾಗಿದೆ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಾರತ್ ಬಯೋಟೆಕ್ ಕಂಪಡನಿಗೆ 1 ಕೋಟಿ ಲಸಿಕೆಗೆ ಆರ್ಡರ್ ಮಾಡಲಾಗಿದೆ. ಸಿರಂ ಇನ್ಸ್ಟಿಟ್ಯೂಟ್ಗೆ 2 ಕೋಟಿ ಲಸಿಕೆಗಾಗಿ ಆರ್ಡರ್ ಮಾಡಲಾಗಿದೆ. 2 ಕೋಟಿ ಲಸಿಕೆಗಾಗಿ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ನಮಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಇಲ್ಲಿಯವರೆಗೆ ಕೇಂದ್ರ ಸರ್ಕಾರ 1 ಕೋಟಿ 15 ಲಕ್ಷ ಲಸಿಕೆಯನ್ನು ಉಚಿತವಾಗಿ ನೀಡಿದೆ" ಎಂದು ಮಾಹಿತಿ ನೀಡಿದ್ದಾರೆ.
"ರಾಜ್ಯದಲ್ಲಿ 18 ರಿಂದ 45 ವರ್ಷದ ಜನರಿಗೆ ನಿಯಮ ಪ್ರಕಾರ ಲಸಿಕೆ ನೀಡಲಾಗುವುದು. ಶಿಕ್ಷಣ ಇಲಾಖೆಯ ಶಿಕ್ಷಕರು ಸೇರಿದಂತೆ 23 ಗ್ರೂಪ್ಗಳನ್ನು ಮಾಡಿದ್ದೇವೆ. ಇವರಿಗೆಲ್ಲಾ ಹಂತ ಹಂತವಾಗಿ ಲಸಿಕೆ ನೀಡುತ್ತೇವೆ" ಎಂದಿದ್ದಾರೆ.