ನವದೆಹಲಿ, ಮೇ.23 (DaijiworldNews/PY): "ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿದೇಶಗಳ ನೆರವಿನಿಂದ ಎ.27ರಿಂದ ಇಲ್ಲಿಯವರೆಗೆ 16,530 ಆಮ್ಲಜನಕ ಕಾನ್ಸನ್ಟ್ರೇಟರ್ಗಳು, 19 ಆಮ್ಲಜನಕ ಉತ್ಪಾದನಾ ಘಟಕ, 6.6 ಲಕ್ಷ ರೆಮ್ಡಿಸಿವಿರ್ ಔಷಧಿ ಬಾಟಲಿಗಳು ಹಾಗೂ 15,901 ಆಮ್ಲಜನಕ ಸಿಲಿಂಡರ್ಗಳನ್ನು ರವಾನಿಸಲಾಗಿದೆ" ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
"ಸುವ್ಯವಸ್ಥಿತವಾದ ಯಾಂತ್ರಿಕ ವ್ಯವಸ್ಥೆಯ ಮೂಲಕ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣಗಳ ಸರಬರಾಜು ಸೂಕ್ತ ಸಮಯಕ್ಕೆ ಆಗುತ್ತಿದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಎ.27ರಿಂದ ಕೇಂದ್ರ ಸರ್ಕಾರವು ವಿವಿಧ ದೇಶಗಳು ಹಾಗೂ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿನ ಸಹಕಾರದಿಂದ ಕೊರೊನಾ ವೈದ್ಯಕೀಯ ಸೌಲಭ್ಯ ಹಾಗೂ ಸಲಕರಣೆಗಳ ಸಹಾಯವನ್ನು ಪಡೆಯುತ್ತಿದೆ.