ನವದೆಹಲಿ, ಮೇ.22 (DaijiworldNews/PY): ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ತಂದೆ ಹಾಗೂ ಸಹೋದರನಿಗೆ ಕೇಂದ್ರ ಸರ್ಕಾರ ವಿಐಪಿ ಭದ್ರತೆ ನೀಡಿದೆ.
ಕೇಂದ್ರ ರಕ್ಷಣಾ ಪಡೆಗಳಿಂದ ಕೇಂದ್ರ ಗೃಹ ಸಚಿವಾಲಯ ಅವರಿಗೆ ವೈ ಪ್ಲಸ್ ಭದ್ರತೆ ನೀಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
"ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಕುಮಾರ್ ಅಧಿಕಾರಿ ಹಾಗೂ ಸಹೋದರ ಬಿಬ್ಯೆಂದು ಅಧಿಕಾರಿಗೆ ಜೀವ ಬೆದರಿಕೆ ಇರುವ ವರದಿಯನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ಭದ್ರತೆ ನೀಡಿದೆ" ಎಂದು ತಿಳಿಸಿದ್ದಾರೆ.
ಶಿಶಿರ್ ಕುಮಾರ್ ಅಧಿಕಾರಿ ಅವರು ಕಾಂತಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ದಿಬ್ಯೆಂದು ಅಧಿಕಾರಿ ತಮ್ಲುಕ್ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ.