ನವದೆಹಲಿ, ಮೇ.22 (DaijiworldNews/PY): "ಭಾರತದಲ್ಲಿ 850 ಮಿಲಿಯನ್ ಡೋಸ್ನಷ್ಟು ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಯಾಗಲಿದ್ದು, ಆಗಸ್ಟ್ನಿಂದ ತಯಾರಾಗಲಿದೆ" ಎಂದು ರಷ್ಯಾದ ಭಾರತೀಯ ರಾಯಭಾರಿ ಬಾಲ ವೆಂಕಟೇಶ್ ವರ್ಮಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಗತ್ತಿನ ಶೇ.65-70ರಷ್ಟು ಸ್ಪುಟ್ನಿಕ್ ಲಸಿಕೆ ಭಾರತದಲ್ಲಿಯೇ ಉತ್ಪಾದನೆಯಾಗಲಿದೆ" ಎಂದಿದ್ದಾರೆ.
"ಕೊರೊನಾ ವಿರುದ್ದ ಹೋರಾಡುತ್ತಿರುವ ಭಾರತಕ್ಕೆ ರಷ್ಯಾ ಸುಮಾರು 1,50,000ಕ್ಕಿಂತ ಹೆಚ್ಚು ಸ್ಪುಟ್ನಿಕ್ ವಿ ಲಸಿಕೆಯನ್ನು ಸರಬರಾಜು ಮಾಡಿದೆ. ಭಾರತಕ್ಕೆ ರಷ್ಯಾ ಮೇ ತಿಂಗಳ ಕೊನೆಯ ವಾರದೊಳಗೆ ಮೂರು ಮಿಲಿಯನ್ ಸ್ಪುಟ್ನಿಕ್ ವಿ ಲಸಿಕೆಯನ್ನು ಸರಬರಾಜು ಮಾಡಲಿದೆ" ಎಂದು ವರದಿ ತಿಳಿಸಿದೆ.
ರಷ್ಯಾದಿಂದ ಮೊದಲ ಹಂತದಲ್ಲಿ ಲಸಿಕೆ ಸರಬರಾಜು ಆಗಲಿದೆ. ಎರಡನೇ ಹಂತದಲ್ಲಿ ಆರ್ಡಿಐಎಫ್ ರಖಂ ಆಗಿ ಲಸಿಕೆಯನ್ನು ಭಾರತಕ್ಕೆ ರವಾನಿಸಲಿದೆ. ಭಾರತದಲ್ಲಿ ಒಟ್ಟು ಮೂರು ಹಂತಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲಾಗುತ್ತದೆ.