ಮುಂಬೈ, ಮೇ.22 (DaijiworldNews/HR): ಬ್ಯೂಟಿಷಿಯನ್ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ ಬಾಲಿವುಡ್ನ ಖ್ಯಾತ ನಟಿಯೊಬ್ಬರ ವೈಯಕ್ತಿಕ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ಮುಂಬೈನ ಉಪನಗರ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, "ಸಂತ್ರಸ್ತೆಗೆ ಎಂಟು ವರ್ಷಗಳ ಹಿಂದೆ ಆರೋಪಿಯೊಂದಿಗೆ ಸ್ನೇಹ ಬೆಳೆದಿದ್ದು, ಕಳೆದ ವರ್ಷ ಜೂನ್ನಲ್ಲಿ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವ ಪ್ರಸ್ತಾಪವಿಟ್ಟಿದ್ದು ಅದಕ್ಕೆ ತಾನೂ ಸಹ ಒಪ್ಪಿಕೊಂಡಿದ್ದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು, ಬಳಿಕ ಆರೋಪಿ ತನ್ನ ಫ್ಲ್ಯಾಟ್ನಲ್ಲಿ ಬ್ಯೂಟಿಷಿಯನ್ನೊಂದಿಗೆ ಇರಲು ಪ್ರಾರಂಭಿಸಿದನು" ಎಂದು ತಿಳಿಸಿದ್ದಾರೆ.
ಇನ್ನು ಆರೋಪಿಯು ಅನೇಕ ಸಂದರ್ಭಗಳಲ್ಲಿ ಸಂತ್ರಸ್ತೆಯೊಂದಿಗೆ ದೈಹಿಕ ಸಂಬಂಧ ಮುಂದುವರೆಸಿದ್ದು, ಮದುವೆಯಾಗುವುದಾಗಿ ಆಕೆ ಪದೇ ಪದೇ ಕೇಳುತ್ತಿದ್ದರು ಅದನ್ನು ಕಡೆಗಣಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಕುಟುಂಬದಲ್ಲಿ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳಿ ಏಪ್ರಿಲ್ 27ರಂದು ಆರೋಪಿ ಬ್ಯೂಟಿಷಿಯನ್ನಿಂದ 50,000 ರೂಗಳನ್ನು ಪಡೆದು ಕರ್ನಾಟಕದಲ್ಲಿನ ತನ್ನ ಊರಿಗೆ ತೆರಳಿದ್ದು, ಕರ್ನಾಟಕ ತಲುಪಿದ ನಂತರ ಆರೋಪಿ ಸಂತ್ರಸ್ತೆಯ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ಆರೋಪಿಯ ತಾಯಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಬ್ಯೂಟಿಷಿಯನ್ಗೆ ದೂರವಾಣಿ ಕರೆ ಮಾಡಿ ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ್ದಾಗಿದ್ದು ಆರೋಪಿ ನಿನ್ನನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಮಹಿಳೆ ಸಂತ್ರಸ್ತೆಗೆ ತಿಳಿಸಿದ್ದು, ಊರಿನಲ್ಲಿ ವಧು ನಿಶ್ಚಯ ಮಾಡಲಾಗಿದೆ ಎಂದು ಹೇಳಿದ್ದಾಳೆ.
ಈ ಬಗ್ಗೆ ಕೂಡಲೇ ಸಂತ್ರಸ್ತೆಯು ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.