ನವದೆಹಲಿ, ಮೇ.22 (DaijiworldNews/HR): ಕೊರೊನಾ ಬಳಿಕ ಭಾರತದ ಜನರನ್ನು ಭಯಭೀತರನ್ನಾಗಿಸಿದ ಕಪ್ಪು ಶಿಲೀಂಧ್ರವು ಗಾಳಿಯ ಮೂಲಕವೂ ಹರಡುತ್ತೆ ಎಂದು ನವದೆಹಲಿಯ ಏಮ್ಸ್ ಆಸ್ಪತ್ರೆಯ ಪ್ರೊಫೆಸರ್ ಡಾ. ನಿಖಿಲ್ ಟಂಡನ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಏಮ್ಸ್ನ ಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ವಿಭಾಗದ ಪ್ರೊಫೆಸರ್ ಡಾ. ನಿಖಿಲ್ ಟಂಡನ್, "ಕಪ್ಪು ಶಿಲೀಂಧ್ರವು ಗಾಳಿಯ ಮೂಲಕವೂ ಹರಡುತ್ತೆ, ಆದರೆ ಈ ಶಿಲೀಂದ್ರವು ಆರೋಗ್ಯವಂತ ವ್ಯಕ್ತಿಯ ದೇಹ ಹೊಕ್ಕರೂ ಯಾವುದೇ ತೊಂದರೆ ಮಾಡುವುದಿಲ್ಲ" ಎಂದಿದ್ದಾರೆ.
ಇನ್ನು ಕಪ್ಪು ಶಿಲೀಂಧ್ರವು ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದರೆ, ಅಂತಹ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ" ಎಂದು ತಿಳಿಸಿದ್ದಾರೆ.